ADVERTISEMENT

ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 10:47 IST
Last Updated 11 ಆಗಸ್ಟ್ 2019, 10:47 IST
   

ಗಾಂಧಿ ನಗರ: ಗುಜರಾತಿನ ಮೋರ್ಬಿ ಜಿಲ್ಲೆಯ ಕಲ್ಯಾಣ್‌ಪುರ್ ಗ್ರಾಮದಲ್ಲಿ ಪ್ರವಾಹ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿ 1.5 ಕಿಮೀ ನಡೆದ ಪೊಲೀಸ್ ಸಿಬ್ಬಂದಿಯ ರಕ್ಷಣಾಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.

ಗುಜರಾತಿನ ಪೊಲೀಸ್ ಸಿಬ್ಬಂದಿ ಪೃಥ್ವಿರಾಜ್ ಜಡೇಜ ಮಕ್ಕಳಿಬ್ಬರನ್ನು ಹೊತ್ತು ಪ್ರವಾಹದ ಮಧ್ಯೆ ನಡೆದು ರಕ್ಷಣೆ ಮಾಡಿರುವ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟಿಸಿದ್ದು, ಇದುಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಜಡೇಜ ಅವರ ಸಾಹಸ ಕಾರ್ಯವನ್ನು ಅಭಿನಂದಿಸಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡಾ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.