ADVERTISEMENT

ಆಜಾದಿ ಮಾರ್ಚ್: ಶಾಸಕ ಜಿಗ್ನೇಶ್‌ ಮೆವಾನಿ ಸೇರಿ 10 ಮಂದಿಗೆ 3 ತಿಂಗಳ ಜೈಲು ಶಿಕ್ಷೆ

ಐದು ವರ್ಷದ ಹಳೆಯ ಪ್ರಕರಣ: ಮ್ಯಾಜಿಸ್ಟೀರಿಯಲ್‌ ನ್ಯಾಯಾಲಯ ಆದೇಶ

ಪಿಟಿಐ
Published 5 ಮೇ 2022, 11:04 IST
Last Updated 5 ಮೇ 2022, 11:04 IST
ಜಿಗ್ನೇಶ್‌ ಮೆವಾನಿ
ಜಿಗ್ನೇಶ್‌ ಮೆವಾನಿ   

ಮೆಹ್ಸಾನಾ: ಅನುಮತಿ ಪಡೆಯದೇ ‘ಆಜಾದಿ ಮಾರ್ಚ್‌’ ನಡೆಸಿದ ಆರೋಪದ ಐದು ವರ್ಷ ಹಿಂದಿನ ಪ್ರಕರಣದಲ್ಲಿ ಗುಜರಾತ್‌ನ ಸ್ವತಂತ್ರ ಶಾಸಕ ಜಿಗ್ನೇಶ್‌ ಮೆವಾನಿ ಮತ್ತು ಇತರ ಒಂಬತ್ತು ಮಂದಿಗೆ ಇಲ್ಲಿನ ಮ್ಯಾಜಿಸ್ಟೀರಿಯಲ್‌ ನ್ಯಾಯಾಲಯ ಗುರುವಾರ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಜೆ.ಎ. ಪರ್ಮಾರ್ ಅವರು, ಜಿಗ್ನೇಶ್‌ ಮೇವಾನಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್ ಹಾಗೂ ಮೆವಾನಿಯವರ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿ ಒಟ್ಟು ಹತ್ತು ಮಂದಿಯನ್ನು ಕಾನೂನುಬಾಹಿರವಾಗಿ ಸಭೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು.

ನ್ಯಾಯಾಲಯವು ಎಲ್ಲ 10 ಆರೋಪಿಗಳಿಗೆ ತಲಾ ₹ 1,000 ದಂಡವನ್ನೂ ವಿಧಿಸಿದೆ.

ADVERTISEMENT

2017ರ ಜುಲೈನಲ್ಲಿ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ ಅನುಮತಿಯಿಲ್ಲದೆ ‘ಆಜಾದಿ ಮೆರವಣಿಗೆ’ ಕೈಗೊಂಡಿದ್ದಕ್ಕಾಗಿ ಮೆಹ್ಸಾನಾ ‘ಎ’ ವಿಭಾಗದ ಪೊಲೀಸರು ಮೆವಾನಿ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.

ಎಫ್‌ಐಆರ್‌ನಲ್ಲಿ ಹೆಸರಿಸಲಾದ ಒಟ್ಟು 12 ಆರೋಪಿಗಳಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ.ರೇಷ್ಮಾ ಪಟೇಲ್ಆಗ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ. ಆದರೆ, ಪಾಟಿದಾರ್ ಸಮುದಾಯ ನಡೆಸುತ್ತಿದ್ದಮೀಸಲಾತಿಯ ಬೆಂಬಲಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.