ADVERTISEMENT

ಛತ್ತೀಸಗಢ | ಪೊಲೀಸ್‌ – ನಕ್ಸಲರ ಗುಂಡಿನ ಚಕಮಕಿಯಲ್ಲಿ ಆರು ತಿಂಗಳ ಮಗು ಸಾವು

ಪಿಟಿಐ
Published 1 ಜನವರಿ 2024, 16:00 IST
Last Updated 1 ಜನವರಿ 2024, 16:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯ್‌ಪುರ: ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಆರು ತಿಂಗಳ ಮಗುವೊಂದು ಮೃತಪಟ್ಟಿದ್ದು, ಮಗುವಿನ ತಾಯಿ ಗಾಯಗೊಂಡ ಘಟನೆ ಛತ್ತೀಸಗಢದ ಬಿಜಾಪುರದಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಜಿಲ್ಲಾ ಮೀಸಲು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪೊಲೀಸರ ತಂಡವು ನಕ್ಸಲ್‌ ನಿಗ್ರಹದ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಗ್ಯಾಂಗಲೂರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಮುಟವಂದಿ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ. 

ಗಾಯಗೊಂಡ ಮಹಿಳೆ ಮತ್ತು ಇಬ್ಬರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.