ADVERTISEMENT

ಅತ್ಯಾಚಾರ ಪ್ರಕರಣ: ಪೆರೋಲ್‌ ಪಡೆದು ಜೈಲಿನಿಂದ ಹೊರಬಂದ ಗುರ್ಮೀತ್ ಸಿಂಗ್

ಪಿಟಿಐ
Published 5 ಜನವರಿ 2026, 14:54 IST
Last Updated 5 ಜನವರಿ 2026, 14:54 IST
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌   

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಪೆರೋಲ್‌ ಪಡೆದು ರೋಹ್ಟಕ್‌ನ ಸುನರಿಯಾ ಜೈಲಿನಿಂದ ಸೋಮವಾರ ಹೊರಬಂದಿದ್ದಾನೆ.‌

2017ರಲ್ಲಿ ಶಿಕ್ಷೆಗೊಳಗಾದ ಬಳಿಕ 15ನೇ ಸಲ 40 ದಿನಗಳ ಕಾಲ ಪೆರೋಲ್‌ ಪಡೆದು ನ್ಯಾಯಾಲಯದಿಂದ ಹೊರಬಂದಿದ್ದಾನೆ.

‘ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಕೇಂದ್ರ ಕಚೇರಿಯಲ್ಲಿ 40 ದಿನಗಳ ಕಾಲ ತಂಗಲಿದ್ದಾರೆ’ ಎಂದು ಸಂಸ್ಥೆಯ ವಕ್ತಾರ ಹಾಗೂ ವಕೀಲ ಜಿತೇಂದರ್‌ ಖುರಾನಾ ತಿಳಿಸಿದ್ದಾರೆ.

ADVERTISEMENT

2024ರ ಅಕ್ಟೋಬರ್‌ನಲ್ಲಿ 20 ದಿನ, 2025ರ ಏಪ್ರಿಲ್‌ನಲ್ಲಿ 21 ದಿನ, 2025ರ ಜನವರಿಯಲ್ಲಿ 30 ದಿನ ಪೆರೋಲ್‌ ಲಭಿಸಿತ್ತು. ದೆಹಲಿ, ಹರಿಯಾಣ, ಪಂಜಾಬ್‌ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ಗುರ್ಮೀತ್‌ಗೆ ಪೆರೋಲ್ ನೀಡಲಾಗಿತ್ತು.

16 ವರ್ಷಗಳ ಹಿಂದೆ ನಡೆದಿದ್ದ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಸಿಂಗ್‌ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ 2019ರಲ್ಲಿ ಆರೋಪ ಸಾಬೀತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.