ಗುರುಗ್ರಾಮ: ಅಸ್ಸಾಂನ ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸಹವಾಸಿಯನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಲಲ್ಲನ್ ಯಾದವ್ (35) ಬಂಧಿತ ಆರೋಪಿ.
‘ತಿನ್ನಲು ಮೊಟ್ಟೆ ಪಲ್ಯ ಮಾಡಿಕೊಡುವಂತೆ ನನ್ನ ಸಹವರ್ತಿಯಾಗಿದ್ದ ಮಹಿಳೆಯನ್ನು ಕೇಳಿಕೊಂಡೆ. ಆದರೆ, ಆಕೆ ನಿರಾಕರಿಸಿದ್ದರಿಂದಾಗಿ ಕೋಪಗೊಂಡು ಆಕೆಯ ಮೇಲೆ ಸುತ್ತಿಗೆ ಮತ್ತು ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದೆ. ಇದರಿಂದ ಆಕೆ ಮೃತಪಟ್ಟಿದ್ದಳು. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದೆ’ ಎಂದು ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಯಾದವ್, ಬಿಹಾರದ ಮಾಧೆಪುರ ಜಿಲ್ಲೆಯ ಅರಾಹಿ ಗ್ರಾಮದವನಾಗಿದ್ದು, ದೆಹಲಿಯ ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಅಡಗಿದ್ದ ಆತನನ್ನು ಪಾಲಂ ವಿಹಾರ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.