ADVERTISEMENT

ಗುರುಗ್ರಾಮ: ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ನ್ಯಾಯಾಧೀಶರ ಪತ್ನಿ ಸಾವು

ಅಧಿಕ ರಕ್ತಸ್ರಾವವೇ ಕಾರಣ

ಏಜೆನ್ಸೀಸ್
Published 14 ಅಕ್ಟೋಬರ್ 2018, 9:42 IST
Last Updated 14 ಅಕ್ಟೋಬರ್ 2018, 9:42 IST
   

ಗುರುಗ್ರಾಮ: ಇಲ್ಲಿನ ಸೆಕ್ಟರ್‌ 49ರ ಆರ್ಕೇಡಿಯಾ ಮಾರ್ಕೆಟ್‌ನ ಹೊರಭಾಗದಲ್ಲಿ ಶನಿವಾರ ಗುಂಡಿನ ದಾಳಿಗೆ ಒಳಗಾಗಿದ್ದ ಹೆಚ್ಚುವರಿ ಸೆಕ್ಷನ್ಸ್‌ ನ್ಯಾಯಾಧೀಶರ ಪತ್ನಿ ರಿತು ಗಾರ್ಗ್ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಮಗ ಧೃವ (18) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ರಿತು ಗಾರ್ಗ್ ಅವರು ಅಧಿಕ ರಕ್ತಸ್ರಾವದಿಂದ ಭಾನುವಾರ ಬೆಳಿಗ್ಗೆ 11.05ಕ್ಕೆ ಮೃತಪಟ್ಟಿದ್ದಾರೆ. ಗುಂಡಿನ ದಾಳಿ ವೇಳೆ ಅವರ ಎದೆಯ ಬಲ ಭಾಗಕ್ಕೆ ಹೊಡೆತ ಬಿದ್ದಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ. ದೀಪಕ್ ಮತೂರ್ ತಿಳಿಸಿದ್ದಾರೆ.

ADVERTISEMENT

ರಿತು ಅವರ ರಕ್ತದೊತ್ತಡ ತೀರಾ ಕಡಿಮೆ ಇತ್ತು. ಶ್ವಾಸಕೋಶಗಳಲ್ಲಿ ರಕ್ತ ಸ್ರಾವವಾಗಿತ್ತು. ಅಧಿಕ ರಕ್ತಸ್ರಾವವೇ ರಿತು ಅವರ ಸಾವಿನ ಮುಖ್ಯ ಕಾರಣ. ಜೊತೆಗೆ ಮಗ ಧೃವ ಅವರ ತಲೆಗೆ ಭಾರೀ ಹೊಡೆತ ಬಿದ್ದಿದೆ. ಇವರ ಪರಿಸ್ಥಿತಿಯೂ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಡಿಸಿಪಿ ಸುಮೀತ್ ಕುಹಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.