ADVERTISEMENT

ಜ್ಞಾನವಾಪಿ: ಜಿಲ್ಲಾ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮನವಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 15:26 IST
Last Updated 13 ಸೆಪ್ಟೆಂಬರ್ 2022, 15:26 IST
   

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಇದೆ ಎಂದು ಹೇಳಲಾಗುವ ಶೃಂಗಾರ ಗೌರಿ ದೇಗುಲದಲ್ಲಿ ದಿನವೂ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ವಿಚಾರಣೆಗೆ ಅರ್ಹ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ನೀಡಿರುವ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಂಬಂಧ ಅಜುಂಮಾನ್ ಇಂತೆಜಾಮಿಯಾ ಸಮಿತಿಯು ಹಿರಿಯ ವಕೀಲರನ್ನು ಭೇಟಿ ಮಾಡಿತು.

ಅಜುಂಮಾನ್ ಇಂತೆಜಾಮಿಯಾ ಸಮಿತಿಯು ನಗರದಲ್ಲಿನ ಜ್ಞಾನವಾಪಿ ಮಸೀದಿಯು ಸೇರಿದಂತೆ 22 ಮಸೀದಿಗಳನ್ನು ನಿರ್ವಹಿಸುತ್ತಿದೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಸಮಿತಿಯು ಮುಸ್ಲಿಮರ ಪರ ಇದೆ.

ಹಿಂದೂಪರ ವಕೀಲ ವಿಷ್ಣು ಜೈನ್, ‘ಮುಸ್ಲಿಮರ ಪರವಿರುವವರು ಹೈಕೋರ್ಟಿಗೆ ಹೋದರೆ, ನಾವೂ ಕೂಡ ಅಲ್ಲಿಗೆ ಹೋಗಿ, ಕೇವಿಯಟ್ ಸಲ್ಲಿಸುತ್ತೇವೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.