ADVERTISEMENT

ಎಚ್‌1ಬಿ ವೀಸಾ; ಟ್ರಂಪ್‌ ಅಭಿಪ್ರಾಯ ವಿವೇಕಯುತವಾಗಿದೆ: ಶ್ವೇತಭವನ

ಪಿಟಿಐ
Published 25 ನವೆಂಬರ್ 2025, 14:17 IST
Last Updated 25 ನವೆಂಬರ್ 2025, 14:17 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ನ್ಯೂಯಾರ್ಕ್‌/ ವಾಷಿಂಗ್ಟನ್‌: ಎಚ್‌1–ಬಿ ವೀಸಾ ನಿಯಮದ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಅತಿ ಸೂಕ್ಷ್ಮ ಮತ್ತು ವಿವೇಕಯುತ’ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. 

ಅಮೆರಿಕದ ನೌಕರರ ಜಾಗಕ್ಕೆ ಬೇರೆ ದೇಶಗಳ ಪ್ರಜೆಗಳನ್ನು ತಂದು ಕೂರಿಸುವುದನ್ನು ಅವರು ಬೆಂಬಲಿಸುವುದಿಲ್ಲ ಎಂದು ಶ್ವೇತ ಭವನದ ಕಾರ್ಯದರ್ಶಿ ಕರೊಲಿನ್‌ ಲಿವಿಟ್‌ ತಿಳಿಸಿದ್ದಾರೆ.

ಎಚ್‌–1ಬಿ ವೀಸಾ ಕುರಿತ ಟ್ರಂಪ್‌ ಅವರ ನಿರ್ಧಾರವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ವಿದೇಶಿ ಕಂಪನಿಗಳು ಅಮೆರಿಕದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡುತ್ತವೆ ಮತ್ತು ಉದ್ಯೋಗಕ್ಕೆ ವಿದೇಶದ ನೌಕರರನ್ನು ನೇಮಕ ಮಾಡಿಕೊಳ್ಳುತ್ತವೆ. ಆದರೆ ಆ ಜಾಗದಲ್ಲಿ ಅಮೆರಿಕದ ನೌಕರರೇ ಇರಬೇಕು ಎಂಬುದು ಟ್ರಂಪ್‌ ಅವರ ಆಶಯ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.