ADVERTISEMENT

ಕೋವಿಡ್‌ ಮಾನದಂಡ ಆಧರಿಸಿ ಹಜ್ ಯಾತ್ರೆಗೆ ಆಯ್ಕೆ: ಮುಖ್ತಾರ್ ಅಬ್ಬಾಸ್ ನಖ್ವಿ

ಪಿಟಿಐ
Published 22 ಅಕ್ಟೋಬರ್ 2021, 10:20 IST
Last Updated 22 ಅಕ್ಟೋಬರ್ 2021, 10:20 IST
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಮಾನದಂಡಗಳನ್ನು ಆಧರಿಸಿ, 2022ರ ಹಜ್‌ ಯಾತ್ರೆಗೆ ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ತಿಳಿಸಿದರು.

ಶುಕ್ರವಾರ ‘ಹಜ್‌‘ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಹಜ್ ಯಾತ್ರಿಕರು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು. ಭಾರತ ಮತ್ತು ಸೌದಿ ಅರೇಬಿಯಾ ಸರ್ಕಾರಗಳು ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಬೇಕು‘ ಎಂದು ಹೇಳಿದರು.

’ನವೆಂಬರ್ ಮೊದಲ ವಾರದಲ್ಲಿ ಹಜ್‌ ಯಾತ್ರೆ ಕುರಿತು ಪ್ರಕಟಣೆ ಹೊರಡಿಸಲಾಗುತ್ತದೆ. ಇದರ ಜೊತೆಗೆ, ಯಾತ್ರೆಗೆ ತೆರಳಲು ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ‘ ಎಂದು ಹೇಳಿದರು.

ADVERTISEMENT

ಸೌದಿ ಅರೇಬಿಯಾ ಮತ್ತು ಭಾರತ ಸರ್ಕಾರದ ಕೋವಿಡ್ ಶಿಷ್ಟಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಹಜ್‌ಗೆ ಸಿದ್ಧತೆಗಳನ್ನು ಆರಂಭಿಸಲಾಗಿದೆ.ಹಜ್ ಯಾತ್ರೆ ಪ್ರಕ್ರಿಯೆಯು ಶೇ 100ರಷ್ಟು ಡಿಜಿಟಲೀಕರಣವಾಗಿದೆ. ಇಂಡೋನೇಷ್ಯಾ ನಂತರ ಸೌದಿ ಅರೇಬಿಯಾಕ್ಕೆ ದೊಡ್ಡ ಪ್ರಮಾಣದಲ್ಲಿ ಹಜ್ ಯಾತ್ರಿಕರನ್ನು ಕಳುಹಿಸುತ್ತಿರುವ ಎರಡನೇ ರಾಷ್ಟ್ರ ಭಾರತ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.