ADVERTISEMENT

ವೈಟ್‌ ಕಾಲರ್‌ ಉಗ್ರ ಜಾಲ: ಅಲ್ ಫಲಾಹ್‌ ವಿಶ್ವವಿದ್ಯಾಲಯಕ್ಕೆ ಹರಿಯಾಣ ಡಿಜಿಪಿ ಭೇಟಿ

ಪಿಟಿಐ
Published 18 ನವೆಂಬರ್ 2025, 14:38 IST
Last Updated 18 ನವೆಂಬರ್ 2025, 14:38 IST
   

ಚಂಡೀಗಢ: ಫರೀದಾಬಾದ್‌ ಜಿಲ್ಲೆಯಲ್ಲಿರುವ ಅಲ್‌ ಫಲಾಹ್‌ ವಿಶ್ವವಿದ್ಯಾಲಯಕ್ಕೆ ಹರಿಯಾಣ ಡಿಜಿಪಿ ಒ.ಪಿ.ಸಿಂಗ್‌ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

‘ವಿಶ್ವವಿದ್ಯಾಲಯದ ಕೆಲ ವೈದ್ಯರು ‘ವೈಟ್‌ ಕಾಲರ್‌ ಉಗ್ರ ಜಾಲ’ಕ್ಕೆ ಸೇರುವ ಜೊತೆಗೆ ಅದನ್ನು ಅಡಗುತಾಣವನ್ನಾಗಿ ಮಾಡಿಕೊಂಡಿದ್ದರು. ಈ ವಿಚಾರದಲ್ಲಿ ಆಗಿರುವ ಭದ್ರತಾ ಲೋಪ ಕುರಿತು ತನಿಖೆ ನಡೆಸಬೇಕು’ ಎಂದು ಅವರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಅವರು, ಫರೀದಾಬಾದ್‌ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಕಮಿಷನರ್‌ ಅವರೊಂದಿಗೆ ಸಭೆ ನಡೆಸಿ, ‘ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡ ಬಳಿಕ ನಾಪತ್ತೆಯಾಗಿರುವ ಅಲ್‌ ಫಲಾಹ್ ವಿ.ವಿ ಸಿಬ್ಬಂದಿಯನ್ನು ಶೀಘ್ರವೇ ಪತ್ತೆ ಹಚ್ಚಬೇಕು’ ಎಂದು ಸೂಚಿಸಿದರು.

ADVERTISEMENT

‘ಅಪಾಯಕಾರಿಯಾದ ಇಂಥ ಎಷ್ಟು ಜನರು ವಿಶ್ವವಿದ್ಯಾಲಯವನ್ನು ತಮ್ಮ ಅಡಗು ತಾಣವನ್ನಾಗಿ ಮಾಡಿಕೊಂಡಿದ್ದರು ಹಾಗೂ ಭಾರಿ ಪ್ರಮಾಣದ ಸ್ಫೋಟಕವನ್ನು ಸಂಗ್ರಹಿಸಿದ್ದರು ಎಂಬುದನ್ನು ಪತ್ತೆ ಮಾಡಬೇಕು. ಭದ್ರತೆಯಲ್ಲಿ ಆಗಿರುವ ಲೋಪ ಕುರಿತು ತನಿಖೆ ನಡೆದಾಗ ಇದು ಗೊತ್ತಾಗಲಿದೆ’ ಎಂದು ಡಿಜಿಪಿ ಸಿಂಗ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ಪರಿಶೀಲಿಸಬೇಕು. ಮೂಲಭೂತವಾದಿ ಶಕ್ತಿಗಳು ಯಾರನ್ನೂ ಪ್ರತ್ಯೇಕತಾವಾದದತ್ತ ಸೆಳೆಯುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ
ಒ.ಪಿ.ಸಿಂಗ್‌ ಡಿಜಿಪಿ ಹರಿಯಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.