ADVERTISEMENT

ಓಡಿಶಾ:15 ಆನೆಗಳ ಸಾವಿಗೆ ಕಾರಣ ಏನಿರಬಹುದು?

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 13:20 IST
Last Updated 4 ಅಕ್ಟೋಬರ್ 2019, 13:20 IST
   

ಭುವನೇಶ್ವರ: ಕಳೆದೆರಡು ತಿಂಗಳಲ್ಲಿ ಮೃತಪಟ್ಟಿದ್ದ 15 ಆನೆಗಳಲ್ಲಿ 5 ಆನೆಗಳ ಸಾವಿಗೆ ಕಾರಣ ಏನು ಎಂಬುದನ್ನು ಪಶುವೈದ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಓಡಿಶಾದಲ್ಲಿ ಆಗಸ್ಟ್‌ ತಿಂಗಳ ಮಧ್ಯದಿಂದ ಕಳೆದವಾರದ ವರೆಗೂ 15 ಆನೆಗಳು ಮೃತಪಟ್ಟಿದ್ದವು. ಇವುಗಳಲ್ಲಿ 4 ನಾಲ್ಕು ಮರಿಯಾನೆಗಳು ಸೇರಿದ್ದವು. ಮೃತಪಟ್ಟ ಆನೆಗಳು ಇಲ್ಲಿನ ನಂದನ್‌ ಕನನ್‌ ರಾಷ್ಟ್ರೀಯ ಮೃಗಾಲಯದಲ್ಲಿದ್ದವು.

ಇದೀಗ ಐದು ಆನೆಗಳ ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಲಭ್ಯವಾಗಿದ್ದು ಈ ಆನೆಗಳು ಇಇಎಚ್‌ವಿ (ಎಲಿಫೆಂಟ್‌ ಎಂಡೋಥಿಲಿಯೊಟ್ರೊಫಿಕ್‌ಹರ್ಪಿಸ್‌ವೈರಸ್) ಎಂಬ ಸೋಂಕಿನಿಂದ ಬಳಲುತ್ತಿದ್ದವು ಎಂಬುದು ವರದಿಯಲ್ಲಿ ಹೇಳಲಾಗಿದೆ. ಇದೊಂದು ವೈರಸ್‌ ಸೋಂಕು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ADVERTISEMENT

2011ರಲ್ಲಿ ಅಮೆರಿಕದ ಹೂಸ್ಟನ್‌ನಲ್ಲಿ ನಡೆದ ಆನೆಗಳ ಆರೋಗ್ಯ ಕಾರ್ಯಾಗಾರದಲ್ಲಿಇಇಹೆಚ್‌ವಿ ಕುರಿತು ಚರ್ಚಿಸಲಾಗಿತ್ತು.ಇದು ಮಾರಣಾಂತಿಕ ಕಾಯಿಲೆಯಾಗಿದ್ದು ಹೆಚ್ಚಾಗಿ ಏಷ್ಯಾದ ಯುವ ಆನೆಗಳಲ್ಲಿ ಕಂಡುಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸೋಂಕು ತಗುಲಿದ ಆನೆಗಳ ಸೊಂಡಿಲು, ಕಣ್ಣುಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಕ್ರಮೇಣ ಆನೆಗಳು ಆಹಾರ ಬಿಟ್ಟು ಸಾವನ್ನಪ್ಪುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಜಾಗತಿಕ ಮಟ್ಟದ ವಿಜ್ಞಾನಿಗಳು ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವ ಸಂಶೋಧನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.