ADVERTISEMENT

ಮೋದಿ ಚಿತ್ರದಲ್ಲಿದೆ ಜಾವೇದ್ ಅಖ್ತರ್ ರಚಿಸಿದ ಹಳೇ ಹಾಡು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 12:04 IST
Last Updated 23 ಮಾರ್ಚ್ 2019, 12:04 IST
   

ಮುಂಬೈ: ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಪಿಎಂ ನರೇಂದ್ರ ಮೋದಿ ಟ್ರೇಲರ್‌ನಲ್ಲಿ ಗೀತೆ ರಚನೆಕಾರರ ಪಟ್ಟಿಯಲ್ಲಿ ಜಾವೇದ್ ಅಖ್ತರ್ ಹೆಸರಿತ್ತು. ಈ ಹೆಸರು ನೋಡಿದ ಜಾವೇದ್ ಅಖ್ತರ್, ತಾನು ಪಿಎಂ ನರೇಂದ್ರ ಮೋದಿ ಸಿನಿಮಾದ ಗೀತೆ ರಚನೆ ಮಾಡಿಲ್ಲ, ಟ್ರೇಲರ್‌ನಲ್ಲಿ ಹೆಸರು ನೋಡಿ ದಿಗಿಲುಗೊಂಡೆ ಎಂದು ಶುಕ್ರವಾರ ಟ್ವೀಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಸಿನಿಮಾ ನಿರ್ಮಾಪಕಸಂದೀಪ್ ಸಿಂಗ್ ಜಾವೇದ್ ಅಖ್ತರ್ ರಚಿಸಿದ ಹಳೇ ಹಾಡುಗಳನ್ನು ಈ ಚಿತ್ರಕ್ಕೆ ಬಳಸಿದ್ದೇವೆ.1947: ಅರ್ಥ್ ಸಿನಿಮಾದಲ್ಲಿ ಅಖ್ತರ್ ರಚಿಸಿದಈಶ್ವರ್ ಅಲ್ಲಾ ಮತ್ತು ದಸ್ ಸಿನಿಮಾದ ಸುನೋ ಗೌರ್ ಸೇ ದುನಿಯಾವಾಲೋ ಎಂಬ ಹಾಡನ್ನು ಈ ಚಿತ್ರದಲ್ಲಿ ಬಳಸಲಾಗಿದೆ.ಹಾಗಾಗಿ ಗೀತೆ ರಚನೆಕಾರರ ಪಟ್ಟಿಯಲ್ಲಿ ಜಾವೇದ್ ಸಾಹೇಬ್ ಮತ್ತು ಸಮೀರ್ ಜೀ ಅವರ ಹೆಸರಿದೆ. ನಮ್ಮ ಮ್ಯೂಸಿಕ್ಪಾರ್ಟ್ನರ್ಟೀ ಸೀರಿಸ್ ಎಂದುಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.