ನವದೆಹಲಿ: ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಪ್ರಾಣಿಗಳಿಗೆ ಸುರಕ್ಷಿತ ವಾಸಸ್ಥಾನ ಕಲ್ಪಿಸುವುದು ಅಗತ್ಯ. ಇದೇ ನಮ್ಮ ಆದ್ಯತೆಯಾಗಬೇಕು’ ಎಂದು ಮಂಗಳವಾರ ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಡಿರುವ ಟ್ವೀಟ್‌ಗೆ ಮೋದಿ ಪ್ರತಿಕ್ರಿಯಿಸಿ, ಈ ಟ್ವೀಟ್ ಮಾಡಿದ್ದಾರೆ.
‘ಇದು ಅದ್ಭುತ ಸುದ್ದಿ. ಸಿಂಹ ಹಾಗೂ ಹುಲಿಗಳ ನಂತರ ಚಿರತೆಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಎಲ್ಲ ಸಿಬ್ಬಂದಿಗೆ ಅಭಿನಂದನೆಗಳು’ ಎಂದೂ ಅವರು ಹೇಳಿದ್ದಾರೆ.
ಚಿರತೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕುರಿತ ವರದಿಯನ್ನು ಜಾವಡೇಕರ್ ಬಿಡುಗಡೆ ಮಾಡಿದ್ದಾರೆ. 2018ರಲ್ಲಿ ಚಿರತೆಗಳ ಸಂಖ್ಯೆ 12,852 ಇತ್ತು. 2014ರಲ್ಲಿ ದೇಶದಲ್ಲಿದ್ದ ಇವುಗಳ ಸಂಖ್ಯೆಯಲ್ಲಿ ಶೇ 60ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.