ADVERTISEMENT

ಶ್ರೀನಗರ | ಹಜರತ್‌ಬಾಲ್‌ ಮಸೀದಿಯಲ್ಲಿ ಅಶೋಕ ಲಾಂಛನದ ಫಲಕ ಧ್ವಂಸ: 50 ಜನರು ವಶಕ್ಕೆ

ಪಿಟಿಐ
Published 7 ಸೆಪ್ಟೆಂಬರ್ 2025, 16:07 IST
Last Updated 7 ಸೆಪ್ಟೆಂಬರ್ 2025, 16:07 IST
ಹಜರತ್‌ಬಾಲ್‌ ಮಸೀದಿ
ಹಜರತ್‌ಬಾಲ್‌ ಮಸೀದಿ   

ಶ್ರೀನಗರ: ಹಜರತ್‌ಬಾಲ್‌ ಮಸೀದಿಯಲ್ಲಿ ಅಶೋಕ ಲಾಂಛನ ಹೊಂದಿದ್ದ ಫಲಕವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಈ ಕೃತ್ಯ ಎಸಗಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. 

ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಬಳಿಕ ಈ ಘಟನೆ ನಡೆದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಘಟನೆಯ ವಿಡಿಯೊಗಳನ್ನು ಪರಿಶೀಲಿಸಿ, ಇಷ್ಟು ಜನರನ್ನು ವಶಕ್ಕೆ ಪಡೆದಿದ್ದಾರೆ. 

ADVERTISEMENT

‘ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ, ಆದರೆ ಕೆಲವರನ್ನು ಪ್ರಶ್ನಿಸಲು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.