ADVERTISEMENT

ಚಿಟ್‌ಫಂಡ್‌ ಹಗರಣ: ನಳಿನಿ ಚಿದಂಬರಂಗೆ ಮಧ್ಯಂತರ ರಕ್ಷಣೆ

ಪಿಟಿಐ
Published 18 ಫೆಬ್ರುವರಿ 2019, 19:18 IST
Last Updated 18 ಫೆಬ್ರುವರಿ 2019, 19:18 IST
ನಳಿನಿ ಚಿದಂಬರಂ
ನಳಿನಿ ಚಿದಂಬರಂ   

ಕೋಲ್ಕತ್ತ: ಶಾರದಾ ಚಿಟ್‌ಫಂಡ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪತ್ನಿ ನಳಿನಿ ಚಿದಂಬರಂ ಅವರನ್ನು ಆರು ತಿಂಗಳ ಕಾಲ ಬಂಧಿಸದಂತೆ ಕೋಲ್ಕತ್ತ ಹೈಕೋರ್ಟ್‌ ಸೋಮವಾರ ಸಿಬಿಐಗೆ ನಿರ್ದೇಶನ ನೀಡಿದೆ.

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ನೇತೃತ್ವದ ವಿಭಾಗ ಪೀಠ, ‌ತನಿಖೆಗೆ ಸಹಕಾರ ನೀಡುವಂತೆ ನಳಿನಿಗೆ ಸೂಚನೆ ನೀಡಿದೆ.

ತಮ್ಮ ನಿಲುವುಗಳಿಗೆ ಪೂರಕ ಅಫಿಡವಿಟ್‌ಗಳನ್ನು ಸಲ್ಲಸಿವಂತೆ ಸಿಬಿಐ ಮತ್ತು ನಳಿನಿ ಚಿದಂಬರಂ ಅವರಿಗೆ ತಿಳಿಸಿದೆ.

ADVERTISEMENT

ನಿರೀಕ್ಷಣಾ ಜಾಮೀನು ಅರ್ಜಿ ತ್ವರಿತ ವಿಚಾರಣೆಗೆ ಚಿದಂಬರಂ ಆಗ್ರಹ: (ನವದೆಹಲಿ ವರದಿ): ಇಲ್ಲಿನ ನ್ಯಾಯಾಲಯದಲ್ಲಿರುವ ಏರ್‌ಸೆಲ್‌– ಮ್ಯಾಕ್ಸಿಸ್‌ ಪ್ರಕರಣದ ವಿಚಾರಣೆಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ವಿಳಂಬ ಮಾಡುತ್ತಿವೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರು ಸೋಮವಾರ ಆರೋಪಿಸಿದ್ದಾರೆ. ಚಿದಂಬರಂ ಹಾಗೂ ಪುತ್ರ ಕಾರ್ತಿ ಅವರನ್ನು ಮಾರ್ಚ್‌ 8 ರವರೆಗೆ ಬಂಧಿಸದಂತೆ ನ್ಯಾಯಾಲಯ ಈಗಾಗಲೇ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.