ADVERTISEMENT

ರಾಜ್ಯಸಭೆ ಸದಸ್ಯರಾಗಿ ದೇವೇಗೌಡ ಪ್ರತಿಜ್ಞಾ ವಿಧಿ ಸ್ವೀಕಾರ

ಪಿಟಿಐ
Published 20 ಸೆಪ್ಟೆಂಬರ್ 2020, 17:35 IST
Last Updated 20 ಸೆಪ್ಟೆಂಬರ್ 2020, 17:35 IST
ಪ್ರಮಾಣ ವಚನ ಸ್ವೀಕಾರದ ನಂತರ ಸಭಾಪತಿಗೆ ನಮಸ್ಕರಿಸಿದ ಮಾಜಿ ಪ್ರಧಾನಿ ದೇವೇಗೌಡ
ಪ್ರಮಾಣ ವಚನ ಸ್ವೀಕಾರದ ನಂತರ ಸಭಾಪತಿಗೆ ನಮಸ್ಕರಿಸಿದ ಮಾಜಿ ಪ್ರಧಾನಿ ದೇವೇಗೌಡ    

ನವದೆಹಲಿ:ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಭಾನುವಾರ ರಾಜ್ಯಸಭೆಯಸದಸ್ಯರಾಗಿ ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.ಕರ್ನಾಟಕದಿಂದ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

1996ರ ನಂತರ ದೇವೇಗೌಡ ಅವರು ಮೇಲ್ಮನೆ ಸದಸ್ಯರಾಗಿ ಸದನ ಪ್ರವೇಶಿಸಿದಂತಾಗಿದೆ. ‘ರಾಜ್ಯಸಭೆಗೆ ಒಳ್ಳೆಯ ಸೇರ್ಪಡೆ’ಎಂದು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡು ಬಣ್ಣಿಸಿದರು.

ಮಾಜಿ ಪ್ರಧಾನಿ ಮತ್ತು ದೇಶದ ಅತ್ಯಂತ ಹಿರಿಯ ನಾಯಕರೊಬ್ಬರು ಸದನವನ್ನು ಪ್ರವೇಶಿಸಿದ್ದಾರೆ ಎಂದು ನಾಯ್ಡು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.