ADVERTISEMENT

ಚೀನಾ ಗಡಿ ಸಂಘರ್ಷ | ವಾಸ್ತವ ಸ್ಥಿತಿ ಜನರ ಮುಂದಿಡಿ: ಮೋದಿಗೆ ದೇವೇಗೌಡ ಆಗ್ರಹ

ಕಠಿಣ ಕ್ರಮಕ್ಕೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 12:36 IST
Last Updated 16 ಜೂನ್ 2020, 12:36 IST
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ   

ಬೆಂಗಳೂರು: ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರು ದೇಶದ ಜನರ ಮುಂದಿಡಬೇಕು ಎಂದು ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

‘ಗಲ್ವಾನ್‌ ಕಣಿವೆಯಿಂದ ಬರುತ್ತಿರುವ ವರದಿಗಳು ಆಘಾತಕಾರಿ. ಸಂಘರ್ಷ ತಣ್ಣಗಾಗಿಸುವ ಪ್ರಯತ್ನಗಳ ನಡುವೆಯೂ ನಮ್ಮ ಯೋಧರೇಕೆ ಜೀವ ಕಳೆದುಕೊಳ್ಳಬೇಕಾಯಿತು? ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಚೀನಾ ಜತೆಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣವನ್ನು ಪ್ರಧಾನಿಯವರು ಹಾಗೂ ರಕ್ಷಣಾ ಸಚಿವರು ದೇಶದ ಜನರ ಮುಂದಿಡಬೇಕು’ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.

‘ಭಾರತ ಸರ್ಕಾರವು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಸಮಯ ಬಂದಿದೆ. ದೌರ್ಬಲ್ಯಕ್ಕೆ ಸಂಬಂಧಿಸಿ ನಮ್ಮ ಕಡೆಯಿಂದ ಹೋಗುವ ಪ್ರತಿಯೊಂದು ಸಂಕೇತವೂ ಚೀನಾ ಮತ್ತಷ್ಟು ಪ್ರಚೋದನಾಕಾರಿಯಾಗಿ ವರ್ತಿಸುವಂತೆ ಮಾಡುತ್ತವೆ. ನಮ್ಮ ಕೆಚ್ಚೆದೆಯ ಹುತಾತ್ಮರಿಗೆ ಗೌರವ ಸಲ್ಲಿಸುವಲ್ಲಿ ನಾನು ದೇಶದ ಜತೆಗಿದ್ದೇನೆ. ನಿಮ್ಮ (ಯೋಧರ) ಸಂಕಟದ ಸಮಯದಲ್ಲಿ ದೇಶವು ನಿಮ್ಮೊಂದಿಗಿದೆ’ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಹ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.