ADVERTISEMENT

ರಷ್ಯಾ ಜಲಾಂತರ್ಗಾಮಿ ನಿರ್ಮಾಣ ಕೇಂದ್ರದ ನಿರ್ದೇಶಕ ನಿಗೂಢ ಸಾವು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 6:47 IST
Last Updated 29 ಡಿಸೆಂಬರ್ 2022, 6:47 IST
   

ನವದೆಹಲಿ: ಒಡಿಶಾದಲ್ಲಿ ರಷ್ಯಾದ ಉದ್ಯಮಿ ಹಾಗೂ ರಾಜಕಾರಣಿ ಪಾವೆಲ್‌ ಆ್ಯಂಥವ್‌ ಅವರು ಇದೇ 24ರಂದು ನಿಗೂಢವಾಗಿ ಮೃತಪಟ್ಟ ದಿನವೇ ಭಾರತಕ್ಕೆ ಜಲಾಂತರ್ಗಾಮಿಗಳನ್ನು ಪೂರೈಸುವ ರಷ್ಯಾದ ಅಡ್ಮಿರಾಲ್ಟಿ ಶಿಪ್‌ಯಾರ್ಡ್‌ನ ಮಹಾನಿರ್ದೇಶಕ ಅಲೆಕ್ಸಾಂಡರ್‌ ಬುಝಕೋವ್‌ ಅವರು ಸಹ ಮೃತಪಟ್ಟಿದ್ದಾರೆ.

ಬುಝಕೋವ್‌ ಅವರು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿರುವ ಜೆಎಸ್‌ಸಿ ಅಡ್ಮಿರಾಲ್ಟಿ ಶಿಪ್‌ಯಾರ್ಡ್‌ನಲ್ಲಿ 2012ರಿಂದ ಮುಖ್ಯಸ್ಥರಾಗಿದ್ದರು. ರಷ್ಯಾದ ನೌಕಾಪಡೆಗಾಗಿ ನಿರ್ಮಿಸಲಾಗಿರುವ ’ವೆಲಿಕಿಯಾ ಲುಕಿ‘ ಜಲಾಂತರ್ಗಾಮಿಯನ್ನು ದೇಶಕ್ಕೆ ಸಮರ್ಪಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಂದು ದಿನದ ಬಳಿಕ ಅವರ ಸಾವನ್ನು ಶಿಪ್‌ಯಾರ್ಡ್ ಪ್ರಕಟಿಸಿದೆ.

ಈ ಹಿಂದಿನ ಸೋವಿಯತ್‌ ಒಕ್ಕೂಟದ ಅತ್ಯಂತ ಹಳೆಯ ಹಾಗೂ ದೊಡ್ಡ ಶಿಪ್‌ಯಾರ್ಡ್‌ ಆಗಿರುವ ಅಡ್ಮಿರಾಲ್ಟಿ ಡೀಸೆಲ್‌–ಎಲೆಕ್ಟ್ರಿಕ್‌ ಜಲಾಂತರ್ಗಾಮಿಗಳನ್ನು ನಿರ್ಮಿಸುವಲ್ಲಿ ಖ್ಯಾತವಾಗಿದ್ದು, ಭಾರತೀಯ ನೌಕಾಪಡೆಗೆ ಇಲ್ಲಿಂದ ಕನಿಷ್ಠ 15 ಜಲಾಂತರ್ಗಾಮಿಗಳು ಪೂರೈಕೆಯಾಗಿವೆ.

ADVERTISEMENT

ಒಡಿಶಾದಲ್ಲಿ ಆ್ಟಂಥವ್ ಮತ್ತು ಅವರ ಸ್ನೇಹಿತ ವ್ಲಾಡಿಮಿರ್‌ ಬಿದೆವೊ ಅವರ ನಿಗೂಢ ಸಾವಿನ ಕುರಿತು ಈಗಾಗಲೇ ಸಿಐಡಿ ತನಿಖೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.