ADVERTISEMENT

ಲಸಿಕಾ ಅಭಿಯಾನದ ಬಗ್ಗೆ ರಾಹುಲ್‌ ಗಾಂಧಿ ಹೆಮ್ಮೆಪಡಲಿ: ಸಚಿವ ಮನಸುಖ್‌ ಮಾಂಡವಿಯಾ

ಪಿಟಿಐ
Published 1 ಆಗಸ್ಟ್ 2021, 11:47 IST
Last Updated 1 ಆಗಸ್ಟ್ 2021, 11:47 IST
ಮನಸುಖ್ ಮಾಂಡವಿಯಾ
ಮನಸುಖ್ ಮಾಂಡವಿಯಾ   

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೋವಿಡ್ ಲಸಿಕಾ ಅಭಿಯಾನದ ಬಗ್ಗೆ ಟೀಕೆ ಮಾಡುವ ಬದಲು ಆ ಕುರಿತು ಹೆಮ್ಮೆಪಡುವವರ ಜತೆ ಸೇರಿಕೊಳ್ಳಲಿ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಹೇಳಿದ್ದಾರೆ.

ದೇಶದ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ಕೆಲಸ, ಅವರ ಸಾಧನೆ ಬಗ್ಗೆ ರಾಹುಲ್ ಹೆಮ್ಮೆಪಡಲಿ ಎಂದು ಅವರು ಹೇಳಿದ್ದಾರೆ.

‘ಕಳೆದ ತಿಂಗಳು ದೇಶದಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯವಿತ್ತು? ಜುಲೈ ತಿಂಗಳು ಕಳೆಯಿತು. ಲಸಿಕೆಯ ಕೊರತೆ ಮಾತ್ರ ಕಳೆದುಹೋಗಿಲ್ಲ. ಲಸಿಕೆಗಳು ಎಲ್ಲಿವೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಜುಲೈನಲ್ಲಿ 13 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದ್ದು, ಈ ತಿಂಗಳು ಲಸಿಕಾ ಅಭಿಯಾನ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ 47 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. 24 ಗಂಟೆ ಅವಧಿಯಲ್ಲಿ 60,15,842 ಡೋಸ್ ಲಸಿಕೆ ನೀಡಲಾಗಿದೆ ಎಂದು ಇಂದು (ಭಾನುವಾರ) ಬೆಳಿಗ್ಗೆ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.