ADVERTISEMENT

ರಾಜಸ್ಥಾನ: ಬಿಸಿಗಾಳಿ ಸಾಧ್ಯತೆ

ಪಿಟಿಐ
Published 13 ಏಪ್ರಿಲ್ 2025, 16:20 IST
Last Updated 13 ಏಪ್ರಿಲ್ 2025, 16:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ಸೋಮವಾರದಿಂದ ಪಶ್ಚಿಮ ರಾಜಸ್ಥಾನದಾದ್ಯಂತ ಬಿಸಿಗಾಳಿ ಬೀಸಲಿದ್ದು, ತಾಪಮಾನವು 3ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ.

ಮುಂದಿನ ಕೆಲ ದಿನಗಳವರೆಗೆ ಶುಷ್ಕ ಹವಾಮಾನ ಇರಲಿದೆ. ರಾಜ್ಯದ ಹಲವೆಡೆ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ. 

ಈ ಕುರಿತು ಮಾಹಿತಿ ನೀಡಿದ ಇಲಾಖೆಯ ವಕ್ತಾರರು, ‘ಜೋಧಪುರ, ಬಿಕಾನೇರ್‌ ಹಾಗೂ ಶೆಖಾವತಿ ಪ್ರದೇಶಗಳು ಸೇರಿದಂತೆ ಬರುವ ದಿನಗಳಲ್ಲಿ ಹಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ಗಡಿ ಭಾಗದಲ್ಲಿ ಗರಿಷ್ಠ ತಾಪಮಾನವು 45 ರಿಂದ 46 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.