ADVERTISEMENT

ವಿದ್ಯುತ್ ಕೇಂದ್ರದಲ್ಲಿ ಇಂಧನ ಸೋರಿಕೆ; ನದಿಗೆ ಹರಿಯುತ್ತಿರುವ ವಿಡಿಯೊ ಹರಿದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2024, 9:49 IST
Last Updated 11 ಜನವರಿ 2024, 9:49 IST
<div class="paragraphs"><p>ವಿದ್ಯುತ್ ಕೇಂದ್ರದಲ್ಲಿ ಇಂಧನ ಸೋರಿಕೆ</p></div>

ವಿದ್ಯುತ್ ಕೇಂದ್ರದಲ್ಲಿ ಇಂಧನ ಸೋರಿಕೆ

   

X/@BinaNepram


ADVERTISEMENT

ಇಂಫಾಲ(ಮಣಿಪುರ): ವಿದ್ಯುತ್‌ ಕೇಂದ್ರವೊಂದರಿಂದ ಭಾರೀ ಪ್ರಮಾಣದ ಉಳಿಕೆ ಇಂಧನ (heavy fuel) ಸೋರಿಕೆಯಾಗಿ ನದಿಗೆ ಹರಿದುಹೋಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾಂಗ್‌ಪೋಕ್ಪಿ ಜಿಲ್ಲೆಯ ಲೀಮಾಖೋಂಗ್ ವಿದ್ಯುತ್ ಕೇಂದ್ರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಾಂಟೊ ಸಬಲ್ ಮತ್ತು ಸೆಕ್ಮಾಯಿ ಮುಂತಾದ ಗ್ರಾಮಗಳ ಮೂಲಕ ಹಾದುಹೋಗುವ ನದಿಗಳಿಗೆ ಇಂಧನ ಸೋರಿಕೆಯಿಂದ ಅಪಾಯ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ನದಿಗಳು ಗ್ರಾಮಗಳ ಜೀವನಾಡಿಯಾಗಿವೆ. ದಿನ ನಿತ್ಯದ ಕೆಲಸಗಳಿಗೆ ನದಿಯ ನೀರನ್ನೇ ಬಳಸುತ್ತಿದ್ದೇವೆ. ಇಂಧನ ಸೋರಿಕೆಯಾದಾಗಿನಿಂದ ಗ್ರಾಮಸ್ಥರಲ್ಲಿ ಭಯ ಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಕೊಡಬೇಕಿದೆ’ ಎಂದು ಕಾಂಟೊ ಸಬಲ್‌ ನಿವಾಸಿ ನೊಂಗ್ಮಾಯಿ ತಿಳಿಸಿದ್ದಾರೆ.

ಇಂಧನ ನದಿಗಳಿಗೆ ಹರಿಯದಂತೆ ತಡೆಯಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮುಖ್ಯಮಂತ್ರಿ ಕಚೇರಿ ನಿರ್ದೇಶನ ನೀಡಿದೆ.

ಘಟನೆಯ ಹಿಂದೆ ಕಿಡಿಗೇಡಿಗಳ ಕೈವಾಡವಿದೆಯೇ? ಅಥವಾ ಆಕಸ್ಮಿಕವಾಗಿ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.