ADVERTISEMENT

Photos| ಚೆನ್ನೈನಲ್ಲಿ ಕುಂಭದ್ರೋಣ ಮಳೆ: ನೆರೆ ಪರಿಸ್ಥಿತಿ ವಿವರಿಸುವ ಚಿತ್ರಗಳು

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿ ಮತ್ತು ಇತ್ತೀಚಿನವಾಯುಭಾರ ಕುಸಿತದ ಕಾರಣದಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಚೆನ್ನೈನಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪ್ರಕೃತಿ ವೈಪರಿತ್ಯಕ್ಕೆ ಹಲವರು ಸಾವಿಗೀಡಾಗಿದ್ದಾರೆ. ಚೆನ್ನೈನ ಮಳೆ ಪರಿಸ್ಥಿತಿಯನ್ನು ವಿವರಿಸುವ ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 6:29 IST
Last Updated 11 ನವೆಂಬರ್ 2021, 6:29 IST
ಚೆನ್ನೈನ ಪುರಸೈವಾಕ್ಕಮ್‌ನ ಕೆಎಂ ಗಾರ್ಡನ್‌ನಲ್ಲಿ ಜಲಾವೃತಗೊಂಡಿರುವ ರಸ್ತೆ (ಪಿಟಿಐ)
ಚೆನ್ನೈನ ಪುರಸೈವಾಕ್ಕಮ್‌ನ ಕೆಎಂ ಗಾರ್ಡನ್‌ನಲ್ಲಿ ಜಲಾವೃತಗೊಂಡಿರುವ ರಸ್ತೆ (ಪಿಟಿಐ)   
ಮಳೆಯಿಂದಾಗಿ ಮೇಲ್ಸುತುವೆ ಕೆಳಗೆ ಆಶ್ರಯ ಪಡೆದಿರುವ ಜನ (ಎಎಫ್‌ಪಿ )
ಚೆನ್ನೈನ ಕಾಸಿಮೇಡು ಬಂದರಿನಲ್ಲಿ ಲಂಗರು ಹಾಕಿರುವ ದೋಣಿಗಳು (ಎಎಫ್‌ಪಿ)
ಮಳೆಯ ನಡುವೆಯೂ ಬಂದರಿನತ್ತ ಧಾವಿಸಿ ಬರುತ್ತಿರುವ ಮೀನುಗಾರಿಕಾ ದೋಣಿ (ಎಎಫ್‌ಪಿ)
ಚೆನ್ನೈ ನಗರದ ರಸ್ತೆಗಳು ನೀರಿನಿಂದ ಆವೃತಗೊಂಡಿರುವುದು (ಪಿಟಿಐ)
ನೆರೆಗೆ ಸಿಲುಕಿದ್ದ ನಾಗರಿಕರನ್ನು ರಕ್ಷಿಸಿ ಕರೆತರುತ್ತಿರುವ ಪೌರ ಕಾರ್ಮಿಕರು (ಐಎಎನ್‌ಎಸ್‌)
ಚೆನ್ನೈನ ಕೆಎಂ ಗಾರ್ಡನ್‌ ಪ್ರದೇಶದ ರಸ್ತೆಯೊಂದು ಜಲಮಯಗೊಂಡಿರುವುದು (ಪಿಟಿಐ)
ನೀರಲ್ಲೇ ನಡೆದು ಸಾಗುತ್ತಿರುವ ನಾಗರಿಕರು (ಪಿಟಿಐ)
ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುತ್ತಿರುವ ವಿಪತ್ತು ನಿರ್ವಹಣಾ ಸಿಬ್ಬಂದಿ (ಐಎಎನ್‌ಎಸ್‌)
ಮರೀನಾ ಬೀಚ್‌ನ ಜಲಾವೃತಗೊಂಡ ಪ್ರದೇಶದಲ್ಲಿ ಯುವಕನೊಬ್ಬ ಫ್ರಿಜ್‌ ಅನ್ನು ತೆಪ್ಪವಾಗಿಸಿಕೊಂಡ ಸನ್ನಿವೇಶ (ಎಎಫ್‌ಪಿ)
ಮರೀನಾ ಬೀಚ್‌ನ ಈಗಿನ ದೃಶ್ಯ (ಎಎಫ್‌ಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.