ADVERTISEMENT

ಕೇರಳ | ಭಾರಿ ಮಳೆ: ಆಲಪ್ಪುಳ ಜಿಲ್ಲೆಯಲ್ಲಿ ಕುಸಿಯಿತು 151 ವರ್ಷ ಹಳೆಯ ಚರ್ಚ್

ಏಜೆನ್ಸೀಸ್
Published 11 ಆಗಸ್ಟ್ 2020, 11:54 IST
Last Updated 11 ಆಗಸ್ಟ್ 2020, 11:54 IST
ಚರ್ಚ್‌ ಕುಸಿದು ಬಿದ್ದಿರುವುದು.
ಚರ್ಚ್‌ ಕುಸಿದು ಬಿದ್ದಿರುವುದು.   
""
""

ಆಲಪ್ಪುಳ(ಕೇರಳ): ಜಿಲ್ಲೆಯ ಚುಂಗಮ್‌ ಕುರುವೆಲ್ಲೈ ಪದಶೇಖರಂ ಪ್ರದೇಶದಲ್ಲಿದ್ದ 151 ವರ್ಷಗಳಷ್ಟು ಹಳೆಯ ಸೇಂಟ್‌ ಪೌಲ್‌ ಚರ್ಚ್ ಮಂಗಳವಾರ ಕುಸಿದು ಬಿದ್ದಿದೆ.‌

ಭತ್ತದ ಗದ್ದೆಗಳ ನಡುವೆ ಇದ್ದ ಚರ್ಚ್‌ಗೆ ನೀರು ನುಗ್ಗಿದ ಪರಿಣಾಮ ಚರ್ಚ್‌ ಕುಸಿದಿದೆ.

ಚರ್ಚ್‌ ಕುಸಿಯುವ ಮುನ್ಸೂಚನೆ ಇದ್ದದ್ದರಿಂದ ಅಧಿಕಾರಿಗಳುಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಹೀಗಾಗಿಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ಕೇರಳದ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ.

ಇಡುಕ್ಕಿ ಜಿಲ್ಲೆಯ ರಾಜಮಲ ಎಂಬಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ 52ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.