ADVERTISEMENT

ಕೇರಳದಲ್ಲಿ 17 ಸಾವು; ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಬಂದ್, ರೈಲು ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 6:04 IST
Last Updated 9 ಆಗಸ್ಟ್ 2019, 6:04 IST
   

ಕೇರಳ: ಕೇರಳದಲ್ಲಿಮತ್ತೊಮ್ಮೆ ಪ್ರಳಯ ಭೀತಿ ಆವರಿಸಿಕೊಂಡಿದೆ.ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಬಿರುಸುಗೊಂಡಿದ್ದು ಹಲವೆಡೆ ಭೂಕುಸಿತವುಂಟಾಗಿದೆ. ಮಹಾಮಳೆಯಿಂದಾಗಿ ಅಪಾರ ನಾಶನಷ್ಟವುಂಟಾಗಿದ್ದು ಇಲ್ಲಿಯವರೆಗೆ 17 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.ಗುರುವಾರ ರಾತ್ರಿ ಹಲವೆಡೆ ಭೂಕುಸಿತವುಂಟಾಗಿತ್ತು.

ಮಳೆ ಹಾನಿ ಎಲ್ಲೆಲ್ಲಿ?
*
ಮಲಪ್ಪುರ ಎಡವಣ್ಣ ಒತಾಯಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮನೆ ಬಿದ್ದು ಒಂದು ಕುಟುಂಬದ ನಾಲ್ವರು ಮೃತ ಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಇದ್ದಾರೆ.ಕುಟ್ಟಶೇರಿ ಉನೈಸ್, ನುಸ್ರತ್, ಸನಾ, ಶನಿಲ್ ಮೃತರು.
* ಕೋಯಿಕ್ಕೋಡ್ ಕುಟ್ಯಾಡಿ ವಳಯನ್ನೂರಿನಲ್ಲಿ ಮಳೆ ನೀರಿನಲ್ಲಿ ಸಿಲುಕಿ ಇಬ್ಬರು ಮೃತರಾಗಿದ್ದಾರೆ.ಮಾಕ್ಕೂವ್ ಮುಹಮ್ಮದ್ ಹಾಜಿ, ಶರೀಫ್ ಸಖಾಫಿ ಮೃತರು.
* ವಡಗರ ವಿಲಂಗಾಡ್ ಬೆಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿದು ಮೂವರು ನಾಪತ್ತೆಯಾಗಿದ್ದಾರೆ.
* ಕಣ್ಣವಂ ವನದಲ್ಲಿ ಭೂ ಕುಸಿತ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
* ಭಾರತಪ್ಪುಳದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ತೀರ ಪ್ರದೇಶದ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
* ಪಾಲಾಯಿಯಲ್ಲಿ ಭೂಕುಸಿತ ಮತ್ತು ಪ್ರವಾಹ
* ಪಾಲಕ್ಕಾಡ್‌ನಲ್ಲಿ ಭೂಕುಸಿಕ
* ಪಟ್ಟಾಂಬಿ ಸೇತುವೆ ಮೇಲೆ ನೀರು ತುಂಬಿದ್ದರಿಂದ ಸಂಚಾರ ಸ್ಥಗಿತ
* ರೈಲ್ವೆ ಹಳಿಯಲ್ಲಿ ಮರ ಬಿದ್ದ ಕಾರಣ ಆಲಪ್ಪುಳ, ಕೋಟ್ಟಯಂ ರೈಲ್ವೆ ಹಾದಿಯಾಗಿ ಸಂಚರಿಸುವ ರೈಲುಗಳು ರದ್ದಾಗಿವೆ.
* ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಭಾನುವಾರದವರೆಗೆ ಮುಚ್ಚಲಾಗಿದೆ.
* ಗುರುವಾರ ರಾತ್ರಿ ಭೂ ಕುಸಿತ ಸಂಭವಿಸಿದ್ದ ಪುತ್ತುಮಲ ಎಂಬಲ್ಲಿಗೆ ರಕ್ಷಣಾ ಕಾರ್ಯಕರ್ತರು ಇನ್ನೂ ತಲುಪಿಲ್ಲ.ಇಲ್ಲಿ 50 ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ.ಇಲ್ಲಿಗೆ ಹೋಗುವ ದಾರಿಯಲ್ಲಿ ನಿರಂತರವಾಗಿ ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ.ಭಾರತಪ್ಪುಳದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ತೀರ ಪ್ರದೇಶದ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
*ಪಾಲಾಯಿಯಲ್ಲಿ ಭೂಕುಸಿತ ಮತ್ತು ಪ್ರವಾಹ
*ಪಾಲಕ್ಕಾಡ್‌ನಲ್ಲಿ ಭೂಕುಸಿಕ
*ಪಟ್ಟಾಂಬಿ ಸೇತುವೆ ಮೇಲೆ ನೀರು ತುಂಬಿದ್ದರಿಂದ ಸಂಚಾರ ಸ್ಥಗಿತ
* ರೈಲ್ವೆ ಹಳಿಯಲ್ಲಿ ಮರ ಬಿದ್ದ ಕಾರಣ ಆಲಪ್ಪುಳ, ಕೋಟ್ಟಯಂ ರೈಲ್ವೆ ಹಾದಿಯಾಗಿ ಸಂಚರಿಸುವ ರೈಲುಗಳು ರದ್ದಾಗಿವೆ.
* ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಭಾನುವಾರದವರೆಗೆ ಮುಚ್ಚಲಾಗಿದೆ.
* ಗುರುವಾರ ರಾತ್ರಿ ಭೂ ಕುಸಿತ ಸಂಭವಿಸಿದ್ದ ಪುತ್ತುಮಲ ಎಂಬಲ್ಲಿಗೆ ರಕ್ಷಣಾ ಕಾರ್ಯಕರ್ತರು ಇನ್ನೂ ತಲುಪಿಲ್ಲ.ಇಲ್ಲಿ 50 ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ.ಇಲ್ಲಿಗೆ ಹೋಗುವ ದಾರಿಯಲ್ಲಿ ನಿರಂತರವಾಗಿ ಭೂಕುಸಿತ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ.

ರೈಲು ರದ್ದು
ಮಳೆಯ ಆರ್ಭಟದಿಂದಾಗಿ ಕೇರಳದಲ್ಲಿ ರೈಲು ಸಂಚಾರ ಭಾಗಶಃ ವ್ಯತ್ಯಯಗೊಂಡಿದೆ.

ರದ್ದಾಗಿರುವ ರೈಲುಗಳ ಮಾಹಿತಿ (ಭಾರತೀಯ ರೈಲ್ವೆ ಸೂಚನೆ)
ಎರ್ನಾಕುಳಂ - ಆಲಪ್ಪುಳ ಪ್ಯಾಸೆಂಜರ್ (56379)
ಆಲಪ್ಪುಳ- ಎರ್ನಾಕುಳಂ ಪ್ಯಾಸೆಂಜರ್ (56302)
ಎರ್ನಾಕುಳಂ- ಕಾಯಂಕುಳಂ ಪ್ಯಾಸೆಂಜರ್ (56381)
ಕಾಯಂಕುಳಂ- ಎರ್ನಾಕುಳಂ ಪ್ಯಾಸೆಂಜರ್ (56382)
ಎರ್ನಾಕುಳಂ - ಕಾಯಂಕುಳಂ ಪ್ಯಾಸೆಂಜರ್ (56387)
ಕೊಲ್ಲಂ- ಎರ್ನಾಕುಳಂ ಮೆಮು (ಕೋಟ್ಟಯಂ ದಾರಿಯಾಗಿ - 66301)
ಕೊಲ್ಲಂ- ಎರ್ನಾಕುಳಂ ಮೆಮು (ಆಲಪ್ಪುಳ ದಾರಿಯಾಗಿ )

ADVERTISEMENT

ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಭಾನುವಾರದವರೆಗೆ ಮುಚ್ಚಲಾಗಿದೆ
ಮಹಾಮಳೆಯಿಂದಾಗಿ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಭಾನುವಾರದವರೆಗೆ ಮುಚ್ಚಲಾಗಿದೆ. ಭಾನುವಾರ ಸಂಜೆ ಮೂರು ಗಂಟೆಯವರೆಗೆ ವಿಮಾನ ನಿಲ್ದಾಣ ಕಾರ್ಯವೆಸಗುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಮಳೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಭಾನುವಾರದ ವರೆಗೆ ಸೇವೆ ನಿಲ್ಲಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಇಲ್ಲಿಂದ ಕೆಲವು ವಿಮಾನಗಳನ್ನು ಬೇರೆ ದಾರಿಯಾಗಿ ಕಳಿಸಿಕೊಡಲಾಗುವುದು
ಬೇರೆ ದಾರಿಯಾಗಿ ಸಾಗುವ ವಿಮಾನಗಳು
ಇಂಡಿಗೊ - ಬೆಂಗಳೂರು
ಏರ್ ಇಂಡಿಯಾ - ತಿರುವನಂತಪುರಂ
ಗೋ ಏರ್ - ಹೈದರಾಬಾದ್
ಸಿಲ್ಕ್ ಏರ್ - ಕೊಯಂಬತ್ತೂರ್
ಏರ್ ಇಂಡಿಯಾ ಎಕ್ಸ್‌ಪ್ರೆಸ್ - ತಿರುವನಂತಪುರಂ
ಏರ್ ಏಷ್ಯಾ- ತಿರುಚ್ಚಿ
ಮಾಲಿಂದೊ- ತಿರುವನಂತಪುರಂ
ಮಲೇಷ್ಯನ್ - ಚೆನ್ನೈ

ಕಂಟ್ರೋಲ್ ರೂಂ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.