ADVERTISEMENT

‘ಹೆಲಿನಾ’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಹೆಲಿಕಾಪ್ಟರ್ ಮೂಲಕ ಉಡ್ಡಯನ ಸಾಮರ್ಥ್ಯ

ಪಿಟಿಐ
Published 8 ಫೆಬ್ರುವರಿ 2019, 16:23 IST
Last Updated 8 ಫೆಬ್ರುವರಿ 2019, 16:23 IST
   

ಬಾಲೇಶ್ವರ, ಒಡಿಶಾ: ಹೆಲಿಕಾಪ್ಟರ್ ಮೂಲಕ ಉಡ್ಡಯನ ಮಾಡುವ ಸಾಮರ್ಥ್ಯದ ಹೆಲೆನ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ನಾಗ್ ಟ್ಯಾಂಕ್ ನಿರೋಧಕ ಶ್ರೇಣಿಯ ಅತ್ಯಾಧುನಿಕ ಕ್ಷಿಪಣಿಯನ್ನು ಹೆಲಿಕಾಪ್ಟರ್ ಮೂಲಕ ಉಡಾವಣೆ ಮಾಡಲಾಯಿತು. ಇದು 7–8 ಕಿಲೋ ಮೀಟರ್ ವ್ಯಾಪ್ತಿಯ ದಾಳಿ ಸಾಮರ್ಥ್ಯ ಹೊಂದಿದೆ.

ಇಲ್ಲಿನ ಚಾಂಡಿಪುರದಲ್ಲಿರುವ ಕೇಂದ್ರದಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಕ್ಷಿಪಣಿ ಶಕ್ತಿ ಪರೀಕ್ಷೆ ನಡೆಯಿತು. ಉಡಾವಣಾ ಸ್ಥಳದಿಂದ ಸರಾಗವಾಗಿ ಹೊರಟ ಕ್ಷಿಪಣಿಯು ನಿಗದಿತ ಗುರಿಯನ್ನು ಕರಾರುವಕ್ಕಾಗಿ ಮುಟ್ಟಿತು.

ADVERTISEMENT

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಜಗತ್ತಿನ ಉತ್ಕೃಷ್ಟ ಮಟ್ಟದ ಟ್ಯಾಂಕ್ ನಿರೋಧಕ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.

2015ರಲ್ಲಿ ಜೈಸಲ್ಮೇರ್‌ನಲ್ಲಿ ಮೂರು ಬಾರಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. 2018ರಲ್ಲಿ ಪೋಖರಣ್‌ನಲ್ಲಿ ರುದ್ರ ಹೆಲಿಕಾಪ್ಟರ್ ಮೇಲಿನಿಂದ ಉಡಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.