ADVERTISEMENT

ಹೇಮಂತ್‌ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ: ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ

​ಪ್ರಜಾವಾಣಿ ವಾರ್ತೆ
Published 9 ಮೇ 2019, 16:51 IST
Last Updated 9 ಮೇ 2019, 16:51 IST
   

ಭೋಪಾಲ್:ಹೇಮಂತ್ ಕರ್ಕರೆ ಸತ್ತಿದ್ದು ನನ್ನಶಾಪದಿಂದ ಎಂದು ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಠಾಕೂರ್ ಹೇಳಿದ್ದಾರೆ.ಮಾಲೇಗಾಂವ್ ಸ್ಫೋಟದ ಆರೋಪಿ ಪ್ರಗ್ಯಾ,ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಗುರುವಾರ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ ಪ್ರಗ್ಯಾ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆಯಸಾವಿಗೆ ತನ್ನ ಶಾಪವೇ ಕಾರಣ ಎಂದು ಹೇಳಿದ್ದಾರೆ.

2008ರ ನವೆಂಬರ್‌ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ ಹುತಾತ್ಮರಾಗಿದ್ದರು.

ADVERTISEMENT

ಭೋಪಾಲ್‍‌ದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಪ್ರಗ್ಯಾ, ಮಾಲೇಗಾಂವ್ ಪ್ರಕರಣದಲ್ಲಿ ಬಂಧಿಯಾಗಿದ್ದ ತನಗೆ ಜೈಲಿನಲ್ಲಿ ಅಧಿಕಾರಿಗಳುಯಾವ ರೀತಿ ಕಿರುಕುಳಕೊಟ್ಟಿದ್ದರು ಎಂದು ಹೇಳಿ ಕಣ್ಣೀರಿಟ್ಟಿದ್ದರು.

ಇದಾದ ನಂತರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಪ್ರಗ್ಯಾ ವಾಗ್ದಾಳಿ ನಡೆಸಿದ್ದಾರೆ.ಕರ್ಕರೆ ತನಗೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದರು. ಅವರು ಪದೇ ಪದೇ ನನ್ನನ್ನು ವಿಚಾರಣೆಗೊಳಪಡಿಸಿ ತೊಂದರೆ ನೀಡುತ್ತಿದ್ದರು.ನಾನು ನಿರಪರಾಧಿಯಾದ ಕಾರಣ ಅವರ ಪ್ರಶ್ನೆಗಳಿಗೆ ನನ್ನ ಬಳಿಉತ್ತರವಿರುತ್ತಿರಲಿಲ್ಲ.

ಜೈಲಿನಲ್ಲಿರುವಾಗ ಕರ್ಕರೆ ತನಗೆ ನೀಡಿದ ಕಿರುಕುಳ, ಬೆದರಿಕೆಗೆ ನಾನು ಅವರನ್ನು ಶಪಿಸಿದೆ. ನೀನು ಸರ್ವ ನಾಶ ಆಗುತ್ತೀಯಾ ಎಂದು ನಾನು ಶಪಿಸಿದ್ದೆ. ನಾನು ಜೈಲಿಗೆ ಕಾಲಿಟ್ಟ ಅದೇ ದಿನ ಉಗ್ರರಿಂದ ಕರ್ಕರೆ ಹತರಾದರು.
ನನ್ನನ್ನು ಬಂಧಿಸಿದ ದಿನವೇ ಹೇಮಂತ್ ಕರ್ಕರೆಯ ಅಶುಭ ದಿನಗಳು ಆರಂಭವಾಗಿದ್ದವು. ಸರಿಯಾಗಿ 45 ದಿನಗಳ ನಂತರ ಅವರು ಸತ್ತರು. ಅಲ್ಲಿಗೆ ಆ ಅಶುಭ ದಿನಗಳ ಮುಗಿದವು ಎಂದು ಪ್ರಗ್ಯಾ ಹೇಳಿದ್ದಾರೆ.

ಪ್ರಗ್ಯಾ ನಿರಪರಾಧಿ ಮತ್ತು ಹೆಮ್ಮೆಯ ಹಿಂದೂ ಎಂದು ಹೇಳುವ ಕವನನೊಂದು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.