ADVERTISEMENT

ಹೇಮಂತ್ ಕರ್ಕರೆ ಹುತಾತ್ಮ, ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:20 IST
Last Updated 9 ಮೇ 2019, 17:20 IST
   

ನವದೆಹಲಿ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ ಸಾವಿಗೀಡಾಗಿದ್ದು ತನ್ನ ಶಾಪದಿಂದ ಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ಹೇಳಿಕೆ ಬಗ್ಗೆ ಬಿಜೆಪಿ ಪ್ರತಿಕ್ರಿಯಿಸಿದೆ.

ಸಾಧ್ವಿ ಪ್ರಗ್ಯಾ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಮೌನ ಮುರಿದ ಬಿಜೆಪಿ, ಇದು ಸಾಧ್ವಿ ಪ್ರಗ್ಯಾ ಅವರ ವೈಯಕ್ತಿಕ ಹೇಳಿಕೆ.ಆಕೆ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆಎಂದಿದೆ.

ಈ ಹಿಂದೆ ಸಾಧ್ವಿ ಪ್ರಗ್ಯಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಬಿಜೆಪಿ ಪಕ್ಷದ ವಕ್ತಾರ ರಜನೀಶ್ ಅಗರವಾಲ್, ಆಕೆ (ಸಾಧ್ವಿ) ತಮ್ಮ ವೈಯಕ್ತಿಕ ಅನುಭವಗಳಿಂದ ಈ ರೀತಿ ಹೇಳಿದ್ದಾರೆ. ಸೇನಾಪಡೆ ಮತ್ತು ಹುತಾತ್ಮರ ಬಗ್ಗೆ ರಾಜಕೀಯ ಹೇಳಿಕೆ ನೀಡುವ ಮೂಲಕ ಆಕೆ ಚುನಾವಣಾ ಆಯೋಗದ ಆದೇಶವನ್ನುಉಲ್ಲಂಘಿಸಿದ್ದಾರೆ. ಹೇಮಂತ್ ಕರ್ಕರೆ ಅವರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿದ್ದು, 26/11 ಮುಂಬೈ ಭಯೋತ್ಪಾದನಾ ದಾಳಿ ವೇಳೆ ಜನರನ್ನು ರಕ್ಷಿಸಲು ಉಗ್ರರ ವಿರುದ್ಧ ಹೋರಾಡಿ ಹುತಾತ್ಮಾರಾಗಿದ್ದರು ಎಂದಿದ್ದಾರೆ.

2008ರ ನವೆಂಬರ್‌ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.