ADVERTISEMENT

ಭಾರತದ ಕೊರೊನಾ ಸೋಂಕಿತ ರಾಜಕಾರಣಿಗಳಿವರು...

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 17:00 IST
Last Updated 3 ಆಗಸ್ಟ್ 2020, 17:00 IST
   
""
""
""
""
""
""
""
""
""
""
""
""
""
""
""
""
""

ಚೀನಾದಲ್ಲಿ ಮೊದಲ ಬಾರಿಗೆ ಕಂಡು ಬಂದ ಕೊರೊನಾ ವೈರಸ್‌ (ಕೋವಿಡ್‌–19) ಸದ್ಯ ವಿಶ್ವದ 1.80 ಕೋಟಿಗೂ ಹೆಚ್ಚು ಜನರನ್ನು ಭಾದಿಸಿದೆ. 6.90 ಲಕ್ಷಕ್ಕೂ ಅಧಿಕ ಮಂದಿಯ ಪ್ರಾಣ ಕಸಿದಿದೆ. ಜಗತ್ತನ್ನು ಭಾದಿಸುತ್ತಿರುವ ಕೊರೊನಾ ವೈರಸ್‌ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ದೇಶದಲ್ಲಿ ಯಾವೆಲ್ಲ ರಾಜಕಾರಣಿಗಳಲ್ಲಿ ಕೋವಿಡ್‌ ಬಂದಿದೆ ಎಂಬುದರ ಚಿತ್ರ ಸಹಿತ ಮಾಹಿತಿ ಇಲ್ಲಿದೆ.

1. ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋವಿಡ್‌ ಇರುವುದು ಆಗಸ್ಟ್ 2 ರಂದು ತಿಳಿಯಿತು. ಅಷ್ಟೇ ಅಲ್ಲ, ಕೊರೊನಾ ವೈರಸ್‌ ಸೋಂಕು ತಗುಲಿದ ಕೇಂದ್ರ ಸಚಿವ ಸಂಪುಟದ ಮೊದಲ ಮಂತ್ರಿ ಎನಿಸಿಕೊಂಡರು. ಸದ್ಯ ವೈದ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT
ಅಮಿತ್ ಶಾ

2. ಬಿ.ಎಸ್‌ ಯಡಿಯೂರಪ್ಪ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಭಾನುವಾರ ದೃಢವಾಗಿದೆ. ಆದರೆ, ಅವರಿಗೆ ಕಡಿಮೆ ಪ್ರಮಾಣದ ಲಕ್ಷಣಗಳು ಕಂಡು ಬಂದಿವೆ. ಸದ್ಯ ಅವರು ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿ.ಎಸ್‌ ಯಡಿಯೂರಪ್ಪ

3. ಕಾರ್ತಿ ಚಿದಂಬರಂ

ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಆ.3ರಂದು ಕೋವಿಡ್‌ ಪಾಸಿಟಿವ್‌ ವರದಿ ಬಂದಿದೆ.

ಕಾರ್ತಿ ಚಿದಂಬರಂ

4. ಬನ್ವರಿಲಾಲ್ ಪುರೋಹಿತ್

ತಮಿಳುನಾಡಿನ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೂ ಕೊರೊನಾ ವೈರಸ್‌ ಸೋಂಕು ತಗುಲಿದೆ. ಅವರಿಗೆ ಕಡಿಮೆ ಪ್ರಮಾಣದ ಗುಣ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಬನ್ವರಿಲಾಲ್ ಪುರೋಹಿತ್

5. ಕಮಲ್ ರಾಣಿ ವರುಣ್

ಉತ್ತರ ಪ್ರದೇಶದ ಏಕೈಕ ಮಹಿಳಾ ಕ್ಯಾಬಿನೆಟ್ ಮಂತ್ರಿಯಾಗಿದ್ದ ಕಮಲ್ ರಾಣಿ ವರುಣ್ ಅವರು ಆಗಸ್ಟ್ 2 ರಂದು ಲಕ್ನೋದ ಆಸ್ಪತ್ರೆಯಲ್ಲಿ ಕೋವಿಡ್-19ನಿಂದ ನಿಧನರಾದರು. ಅವರಿಗೆ 62 ವರ್ಷವಾಗಿತ್ತು. ಜುಲೈ 18 ರಂದು ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ ಅವರು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು.

ಕಮಲ್ ರಾಣಿ ವರುಣ್

6. ಸ್ವತಂತ್ರ ದೇವ್ ಸಿಂಗ್

ಉತ್ತರ ಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥ, ಸ್ವತಂತ್ರ ದೇವ್ ಸಿಂಗ್ ಅವರಿಗೂ ಕೊರೊನಾ ವೈರಸ್‌ ಸೋಂಕು ತಗುಲಿದೆ. ವೈದ್ಯರ ಸಲಹೆಯನ್ನು ಅನುಸರಿಸಿ ಅವರು ತಮ್ಮ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಆಗಸ್ಟ್ 2 ರಂದು ಹಿಂದಿಯಲ್ಲಿ ಟ್ವೀಟ್‌ಮಾಡಿದ್ದ ಅವರು ತಮಗೆ ಕೋವಿಡ್‌ ಇರುವುದನ್ನು ಖಚಿತಪಡಿಸಿದ್ದರು.

ಸ್ವತಂತ್ರ ದೇವ್ ಸಿಂಗ್

7. ಮಹೇಂದ್ರ ಸಿಂಗ್‌

ಉತ್ತರಪ್ರದೇಶದ ಜಲಶಕ್ತಿ ಸಚಿವ ಮಹೇಂದ್ರ ಸಿಂಗ್‌ ಅವರಿಗೂ ಕೋವಿಡ್‌ ಬಂದಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹೇಂದ್ರ ಸಿಂಗ್‌

8. ಬಿ.ಸಿ ಪಾಟೀಲ
ಕರ್ನಾಟಕದ ಕೃಷಿ ಸಚಿವ ಬಿ.ಸಿ ಪಾಟೀಲ ಅವರಿಗೂ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ. ಅವರು ಪತ್ನಿ ಕ್ವಾರಂಟೈನ್‌ ಆಗಿರುವುದಾಗಿ ಬಿ.ಸಿ ಪಾಟೀಲ ತಿಳಿಸಿದ್ದಾರೆ.

ಬಿ.ಸಿ ಪಾಟೀಲ

9. ಸಿ.ಟಿ ರವಿ

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅವರಿಗೂ ಈ ಹಿಂದೆ ಕೋವಿಡ್‌ ಬಂದಿತ್ತು. ಸದ್ಯ ಅವರು ಗುಣಮುಖರಾಗಿದ್ದಾರೆ.

ಸಿ.ಟಿ ರವಿ

10. ಆನಂದ್‌ ಸಿಂಗ್

ಜುಲೈ 26ರಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೂ ಕೋವಿಡ್‌ ಪಾಸಿಟಿವ್‌ ಬಂದಿತ್ತು.

ಆನಂದ್‌ ಸಿಂಗ್

11. ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೋವಿಡ್‌ ಇರುವುದು ಜುಲೈ 29 ರಂದು ತಿಳಿಯಿತು. ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡನೇ ಬಾರಿಯ ಪರೀಕ್ಷೆಯಲ್ಲೂ ಅವರಿಗೆ ಕೋವಿಡ್‌ ಇರುವುದು ಖಚಿತವಾಗಿದೆ. ಹೀಗಾಗಿ ಚಿಕಿತ್ಸೆ ಮುಂದುವರಿದಿದೆ.

ಶಿವರಾಜ್ ಸಿಂಗ್ ಚೌಹಾಣ್

12. ತಮೋನಾಶ್ ಘೋಷ್

ಪಶ್ಚಿಮ ಬಂಗಾಳ ತೃಣಮೂಲ ಶಾಸಕ ತಮೋನಾಶ್ ಘೋಷ್ (60) ಅವರು ಜೂನ್ 24 ರಂದು ಕೋವಿಡ್‌ ಕಾರಣದಿಂದಾಗಿ ನಿಧನ ಹೊಂದಿದರು.

ತಮೋನಾಶ್ ಘೋಷ್

13. ಸತ್ಯೇಂದ್ರ ಜೈನ್

ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಜುಲೈ 17ರಂದು ದೃಢವಾಯಿತು. ಆದರೆ, ಮರುದಿನವೇ ಅವರಿಗೆ ಕೋವಿಡ್‌ ಇಲ್ಲ ಎಂದು ವರದಿಯಾಯಿತು. ನಂತರದಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತು.

ಸತ್ಯೇಂದ್ರ ಜೈನ್

14. ಜೆ. ಅನ್ಬಳಗನ್‌

ತಮಿಳುನಾಡಿನ ಡಿಎಂಕೆ ನಾಯಕ, ಚೆನ್ನೈನಲ್ಲಿ ಪಕ್ಷದ ಪ್ರಮುಖ ತಂತ್ರಗಾರ ಎನಿಸಿಕೊಂಡಿದ್ದ ಜೆ. ಅನ್ಬಳಗನ್‌ ಅವರು ಜುಲೈ 10ರಂದು ಕೊರೊನಾ ವೈರಸ್‌ನಿಂದ ಕೊನೆಯುಸಿರೆಳೆದರು. ಅನ್ಬಳಗನ್‌ ಅವರು ಡಿಎಂಕೆಯ ವರಿಷ್ಠ ಎಂ.ಕೆ ಸ್ಟಾಲಿನ್‌ ಅವರ ಆಪ್ತರೆನಿಸಿಕೊಂಡಿದ್ದರು.

ಜೆ. ಅನ್ಬಳಗನ್‌

15. ಜೈ ಪ್ರತಾಪ್‌ ಸಿಂಗ್

ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್‌ ಸಿಂಗ್‌ ಸದ್ಯ ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ. ಕಳೆದ 24ರಂದು ಅವರಿಗೆ ಕೋವಿಡ್‌ ಇರುವುದು ದೃಢವಾಗಿತ್ತು.

ಜೈ ಪ್ರತಾಪ್‌ ಸಿಂಗ್

16. ತುಳಸಿ ಸಿಲಾವತ್

ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ತುಳಸಿ ಸಿಲಾವತ್ ಮತ್ತು ಅವರ ಪತ್ನಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಜುಲೈ 29ರಂದು ಸ್ವತಃ ಅವರೇ ಟ್ವಿಟರ್‌ನಲ್ಲಿ ಈ ವಿಚಾರ ತಿಳಿಸಿದ್ದರು.

ತುಳಸಿ ಸಿಲಾವತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.