ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿಯ ಕೊಯ್ಲು ಆರಂಭವಾಗಿದೆ. ಪುಲ್ವಾಮಾ ಜಿಲ್ಲೆಯ ಪಾಂಪೂರ್ ನಗರದ ಕೇಸರಿ ಬೆಳೆಗಾರರು ವಾರ್ಷಿಕ ಬೆಳೆಯ ಕೊಯ್ಲಿನಲ್ಲಿ ತೊಡಗಿದ್ದಾರೆ
ಪಿಟಿಐ ಚಿತ್ರ
ಕೇಸರಿಯನ್ನು ಕೆಂಪು ಚಿನ್ನ ಎಂದೇ ಕಾಶ್ಮೀರಿ ಜನ ಬಣ್ಣಿಸುತ್ತಾರೆ
ಕಾಶ್ಮೀರಿ ಜನ ಸಾಮಾನ್ಯವಾಗಿ ತಯಾರಿಸುವ ಕೇಶ್ವಾ ಸಿಹಿ ಪಾನೀಯದಲ್ಲಿ ಹೆಚ್ಚಾಗಿ ಬಳಸುತ್ತಾರೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೇಸರಿಯ ಬೆಲೆ ಒಂದು ಕೆ.ಜಿಗೆ ₹4 ಲಕ್ಷಕ್ಕೂ ಹೆಚ್ಚಿದೆ
ಇತಿಹಾಸಗಳ ಪ್ರಕಾರ ಕಾಶ್ಮಿರದಲ್ಲಿ ಕ್ರಿಸ್ತ ಪೂರ್ವ 500ರಿಂದಲೇ ಕೇಸರಿ ಬೆಳೆಯನ್ನು ಬೆಳೆಯಲಾಗುತ್ತಿದೆ.
ಆಹಾರ, ಸೌಂದರ್ಯವರ್ಧಕಗಳ ತಯಾರಿಕೆ ಸೇರಿದಂತೆ ಹಲವು ಉತ್ಪನ್ನಗಳಲ್ಲಿ ಕೇಸರಿ ಆದ್ಯತೆ ಪಡೆದಿದೆ
ಅತಿ ಹೆಚ್ಚು ಕೇಸರಿಯನ್ನು ಇರಾನ್‌ನಲ್ಲಿ ಬೆಳೆಯಲಾಗುತ್ತದೆ. ಆದರೆ ತಜ್ಞರು ಕಾಶ್ಮೀರಿ ಕೇಸರಿ ಅತ್ಯುನ್ನತ ಗುಣಮಟ್ಟ ಹೊಂದಿರಲಿದೆ ಎನ್ನುತ್ತಾರೆ.
ಹೂವಿನಿಂದ ಕೇಸರಿಯನ್ನು ಬೇರ್ಪಡಿಸುತ್ತಾ ನಿರತರಾಗಿರುವ ಕಾಶ್ಮೀರಿ ಕುಟುಂಬ
ಮಕ್ಕಳಿಬ್ಬರು ಕೇಸರಿ ಹೂವುಗಳನ್ನು ಕೊಯ್ಲು ಮಾಡುತ್ತಿರುವ ದೃಶ್ಯ
ಮಹಿಳೆಯೊಬ್ಬರು ಕೊಯ್ಲು ಮಾಡಿದ ಕೇಸರಿ ಹೂವುಗಳನ್ನು ತಂದು ರಾಶಿ ಹಾಕಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.