ADVERTISEMENT

ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ದೆಹಲಿ ಹೈಕೋರ್ಟ್‌

ಮನೆ ಪಕ್ಕದಲ್ಲಿರುವ ತೆರೆದ ಕಸದ ತೊಟ್ಟಿ, ಸಾರ್ವಜನಿಕ ಶೌಚಾಲಯವನ್ನು ಕೆಡವಿ

ಪಿಟಿಐ
Published 20 ಫೆಬ್ರುವರಿ 2026, 14:32 IST
Last Updated 20 ಫೆಬ್ರುವರಿ 2026, 14:32 IST
<div class="paragraphs"><p>ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ಹೈಕೋರ್ಟ್‌</p></div>

ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆ: ಹೈಕೋರ್ಟ್‌

   

ನವದೆಹಲಿ: ಮನೆ ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯ ಹಾಗೂ ತೆರೆದ ಕಸದ ತೊಟ್ಟಿಯ ನಿರ್ಮಾಣವು ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದಲ್ಲಿ ಘನತೆಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಆರೋಗ್ಯಕರ ವಾತಾವರಣವು ಆರೋಗ್ಯಕರ ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗೂ ಅನಾರೋಗ್ಯಕರ ವಾತಾವರಣವು ಘನತೆಯಿಂದ ಬದುಕುವ ಹಕ್ಕಿಗೆ ಅಡ್ಡಿ ಉಂಟುಮಾಡಲಿದೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಲ್‌ ಹೇಳಿದ್ದಾರೆ.

ADVERTISEMENT

ಮನೆಯ ಗೋಡೆಗಳಿಗೆ ಹೊಂದಿಕೊಂಡಂತೆ ಅನಧಿಕೃತವಾಗಿ ತೆರೆದ ಕಸದ ತೊಟ್ಟಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವ ಸ್ಥಳೀಯ ಆಡಳಿತದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಫೆ.16ರಂದು ಈ ಆದೇಶವನ್ನು ಹೊರಡಿಸಿದೆ.

‘ನೆರೆಯ ಸುಮಾರು 150 ಕುಟುಂಬಗಳು ತಮ್ಮ ಮನೆಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಮ್ಮ ಮನೆ ಪಕ್ಕದಲ್ಲಿರುವ ಕಸದ ತೊಟ್ಟಿಯನ್ನು ಬಳಸುತ್ತಿದ್ದಾರೆ. ಕಸದ ತೊಟ್ಟಿ ಮತ್ತು ಸಾರ್ವಜನಿಕ ಶೌಚಾಲಯದ ಬಳಿ ನೈರ್ಮಲ್ಯ ಕಾಪಾಡುವಂತೆ ಎಂಸಿಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಇದುವರೆಗೆ ಯಾವೊಂದು ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ಅರ್ಜಿದಾರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಅರ್ಜಿದಾರರ ಮನೆ ಪಕ್ಕದಲ್ಲಿರುವ ತೆರೆದ ಕಸದ ತೊಟ್ಟಿ ಹಾಗೂ ಸಾರ್ವಜನಿಕ ಶೌಚಾಲಯವನ್ನು ಕೂಡಲೇ ಕೆಡವುವಂತೆ ನ್ಯಾಯಾಲಯವು ಎಂಸಿಡಿಗೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.