ADVERTISEMENT

ಹಿಜಾಬ್‌ ಸುತ್ತಲಿನ ವಿವಾದ: ‘ಹಿಜಾಬ್ ಜಿಹಾದ್’ ಎಂದು ವ್ಯಾಖ್ಯಾನಿಸಿದ ವಿಎಚ್‌ಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2022, 13:44 IST
Last Updated 9 ಫೆಬ್ರುವರಿ 2022, 13:44 IST
ಸುರೇಂದ್ರ ಜೈನ್
ಸುರೇಂದ್ರ ಜೈನ್   

ನವದೆಹಲಿ: ಕರ್ನಾಟಕದ ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಸುತ್ತಲಿನ ವಿವಾದವು ಅರಾಜಕತೆಯನ್ನು ಹರಡುವ ಕಾರ್ಯಸೂಚಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿಕೊಂಡಿದೆ.

ಪರಿಷತ್ತಿನ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರ ಹೇಳಿಕೆಯನ್ನು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಬಿಡುಗಡೆ ಮಾಡಿದ್ದಾರೆ.

ಹಿಜಾಬ್‌ ಸುತ್ತಲಿನ ವಿವಾದವನ್ನು ‘ಹಿಜಾಬ್‌ ಜಿಹಾದ್‌’ ಎಂದು ವಿಎಚ್‌ಪಿ ವ್ಯಾಖ್ಯಾನಿಸಿದೆ.

ADVERTISEMENT

‘ಪಿಎಫ್‌ಐನಂತಹ ಜಿಹಾದಿ ಸಂಘಟನೆಗಳು ಇಡೀ ಕರ್ನಾಟಕದಲ್ಲಿ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ದೊಡ್ಡ ಪಿತೂರಿಯನ್ನು ಯೋಜಿಸುತ್ತಿವೆ’ ಎಂದು ವಿಎಚ್‌ಪಿ ತಿಳಿಸಿದೆ.

ಬಾಗಲಕೋಟೆ ಸೇರಿದಂತೆ ಇತರಕಡೆ ನಡೆದ ಕಲ್ಲು ತೂರಾಟ ಇದಕ್ಕೆ ನೇರ ಸಾಕ್ಷಿಯಾಗಿದೆ ಎಂದೂ ಹೇಳಿಕೆಯಲ್ಲಿ ವಿಎಚ್‌ಪಿ ದಾಖಲಿಸಿದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.