ADVERTISEMENT

ಹಿಮಾಚಲ ಪ್ರದೇಶ: ಇವಿಎಂ ರಕ್ಷಣೆಗೆ ಗೈರಾದ 8 ಪೊಲೀಸರ ಅಮಾನತು

ಪಿಟಿಐ
Published 14 ನವೆಂಬರ್ 2025, 6:57 IST
Last Updated 14 ನವೆಂಬರ್ 2025, 6:57 IST
   

ಬಿಲಾಸ್ಪುರ್ (ಹಿಮಾಚಲ ಪ್ರದೇಶ): ಇವಿಎಂ ರಕ್ಷಣೆಗೆ ನಿಯೋಜಿಸಲಾಗಿದ್ದ ಪೊಲೀಸರು, ಅನಿರೀಕ್ಷಿತ ತಪಾಸಣೆಯ ವೇಳೆ ಗೈರಾಗಿದ್ದ ಕಾರಣ 8 ಜನರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಿಲಾಸ್ಪುರ್‌ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಇವಿಎಂ ಸ್ಟ್ರಾಂಗ್‌ ರೂಮ್‌ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ಚೌಧರಿ ಅವರು ಅನಿರೀಕ್ಷಿತ ಭೇಟಿ ನೀಡಿದ ವೇಳೆ, ಪೊಲೀಸರು ಗೈರಾಗಿರುವುದು ಕಂಡು ಬಂದಿದೆ.

‘ಇವಿಎಂ ರಕ್ಷಣೆಯ ವೇಳೆ ಈ ರೀತಿಯ ಘಟನೆ ಜರುಗಿದ್ದು, ಇದು ಗಂಭೀರ ಸುರಕ್ಷತಾ ಲೋಪವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಶಿವ ಚೌಧರಿ ಹೇಳಿದ್ದಾರೆ.

ADVERTISEMENT

ಘಟನೆಯಲ್ಲಿ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ ಹಾಗೂ 6 ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.