ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿ 355 ರಸ್ತೆಗಳ ಸಂಚಾರ ಬಂದ್ ಆಗಿದೆ. 1,000ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳ ಸೇವೆಗೆ ಅಡಚಣೆಯಾಗಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಂಡಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 21 ಸೇರಿದಂತೆ ಕನಿಷ್ಠ 202 ರಸ್ತೆಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕುಲ್ಲುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 305 ಸೇರಿದಂತೆ 64 ರಸ್ತೆ, ಸಿರ್ಮೌರ್‌ನಲ್ಲಿ 28, ಕಾಂಗ್ರಾದಲ್ಲಿ 27, ಚಂಬಾದಲ್ಲಿ ಒಂಬತ್ತು, ಶಿಮ್ಲಾದಲ್ಲಿ ಎಂಟು, ಉನಾದಲ್ಲಿ ಏಳು, ಲಾಹೌಲ್ ಮತ್ತು ಸ್ಪಿತಿಯಲ್ಲಿ ಆರು, ರಾಷ್ಟ್ರೀಯ ಹೆದ್ದಾರಿ 5 ಸೇರಿದಂತೆ ಕಿನ್ನೌರ್‌ನಲ್ಲಿ ಎರಡು ಮತ್ತು ಬಿಲಾಸ್‌ಪುರ ಮತ್ತು ಹಮೀರ್‌ಪುರದಲ್ಲಿ ತಲಾ ಒಂದು ರಸ್ತೆಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿಯೂ ತೀವ್ರ ತೊಂದರೆಯಾಗಿದ್ದು, 1,067 ಟ್ರಾನ್ಸ್‌ಫಾರ್ಮರ್‌ಗಳು ಸೇವೆಯಿಂದ ಹೊರಗುಳಿದಿವೆ. ಕುಲ್ಲುವಿನಲ್ಲಿ 557, ಮಂಡಿಯಲ್ಲಿ 385, ಲಾಹೌಲ್ ಮತ್ತು ಸ್ಪಿತಿಯಲ್ಲಿ 112, ಕಿನ್ನೌರ್‌ನಲ್ಲಿ 11 ಮತ್ತು ಚಂಬಾದಲ್ಲಿ ಎರಡು ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ.
ಇದಲ್ಲದೆ, ಮಂಡಿಯಲ್ಲಿ 44, ಕಾಂಗ್ರಾದಲ್ಲಿ 41, ಹಮೀರ್‌ಪುರದಲ್ಲಿ 14, ಕುಲ್ಲುನಲ್ಲಿ ಒಂಬತ್ತು, ಶಿಮ್ಲಾದಲ್ಲಿ ನಾಲ್ಕು, ಲಾಹೌಲ್ ಮತ್ತು ಸ್ಪಿತಿಯಲ್ಲಿ ಮೂರು ಮತ್ತು ಸೋಲನ್‌ನಲ್ಲಿ ಒಂದು ಸೇರಿದಂತೆ 116 ನೀರು ಸರಬರಾಜು ವ್ಯವಸ್ಥೆಗಳು ಅಸ್ತವ್ಯಸ್ತಗೊಂಡಿವೆ.
ಈ ನಡುವೆ, ಹವಾಮಾನ ಇಲಾಖೆಯು ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದ್ದು, ಆಗಸ್ಟ್ 18, 21, 22 ಮತ್ತು 23 ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಮಂಡಿ ಜಿಲ್ಲೆಯ ಕಟೌಲಾ ಗ್ರಾಮದಲ್ಲಿ ಅತಿ ಹೆಚ್ಚು 120 ಮಿಮೀ ಮಳೆ ಸುರಿದಿದೆ. ಕಾಂಗ್ರಾದಲ್ಲಿ 110.8 ಮಿಮೀ, ನಹಾನ್ 103 ಮಿಮೀ, ಪೌಂಟಾ ಸಾಹಿಬ್ 69.8 ಮಿಮೀ, ಭುಂತರ್ 63.3 ಮಿಮೀ, ಪಲಂಪುರ 60.4 ಮಿಮೀ, ಮಂಡಿ 26 ಮಿಮೀ, ಧರ್ಮಶಾಲಾದಲ್ಲಿ 20.6 ಮಿಮೀ, ಬಿಲಾಸ್ಪುರ್ 10.4 ಮಿಮೀ, ಮನಾಲಿ 8 ಮಿಮೀ, ಕುಫ್ರಿ 4 ಮಿಮೀ, ಸುಂದರನಗರ 2 ಮಿಮೀ ಮತ್ತು ಶಿಮ್ಲಾದಲ್ಲಿ 1 ಮಿಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.