ADVERTISEMENT

ಹಿಮಾಚಲ ಪ್ರದೇಶ | ಭೂಕುಸಿತ: ಬಸ್‌ ಉರುಳಿ 15 ಮಂದಿ ಸಾವು

ಪಿಟಿಐ
Published 7 ಅಕ್ಟೋಬರ್ 2025, 16:02 IST
Last Updated 7 ಅಕ್ಟೋಬರ್ 2025, 16:02 IST
<div class="paragraphs"><p>ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಮಂಗಳವಾರ ಭೂಕುಸಿತದಿಂದಾಗಿ ಬಸ್‌ ಉರುಳಿ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯಿತು&nbsp; </p></div>

ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಮಂಗಳವಾರ ಭೂಕುಸಿತದಿಂದಾಗಿ ಬಸ್‌ ಉರುಳಿ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯಿತು 

   

ಪಿಟಿಐ ಚಿತ್ರ  

ಶಿಮ್ಲಾ: ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿ, ಖಾಸಗಿ ಬಸ್‌ವೊಂದು ಉರುಳಿ ಬಿದ್ದ ಪರಿಣಾಮ ಕನಿಷ್ಠ 15 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

ADVERTISEMENT

ಜಿಲ್ಲೆಯ ಬಾಲುಘಾಟ್‌ನಲ್ಲಿ ಈ ಅವಘಢ ಸಂಭವಿಸಿದೆ. ಹರಿಯಾಣದ ರೋಹ್ಟಕ್‌ನಿಂದ ಘುಮಾರ್ವಿಗೆ ಹೊರಟಿದ್ದ ಈ ನತದೃಷ್ಟ ಬಸ್‌ನಲ್ಲಿ 30–35 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವಶೇಷಗಳಡಿಯಿಂದ ಈ ವರೆಗೆ 15 ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಭೂಕುಸಿತದ ಪರಿಣಾಮ ಇಡೀ ಪರ್ವತವೊಂದು ಬಸ್‌ ಮೇಲೆ ಅಪ್ಪಳಿಸಿದೆ. ಹೀಗಾಗಿ ಇತರ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಮಂಗಳವಾರ ಭೂಕುಸಿತದಿಂದಾಗಿ ಬಸ್‌ ಉರುಳಿ ಬಿದ್ದಿದ್ದು ರಕ್ಷಣಾ ಕಾರ್ಯ ನಡೆಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.