ಶಿಮ್ಲಾ (ಪಿಟಿಐ): ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಾಂದ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ, ಮಹಿಳೆಯೊಬ್ಬರು ಮೃತಪಟ್ಟಿದ್ದು, ಕುಟುಂಬದ ನಾಲ್ವರು ಸದಸ್ಯರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
‘ಸೋಮವಾರ ರಾತ್ರಿ 1.30ರ ವೇಳೆಗೆ ಜಿಲ್ಲೆಯ ಘಾಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಮಂಡ್‌ನಲ್ಲಿ ವ್ಯಾಪಕ ಮಳೆಯಾಗಿ, ಮನೆ ಕುಸಿದುಬಿದ್ದಿದೆ. ಅವಶೇಷಗಳಿಂದ ಒಂದು ದೇಹವನ್ನು ಹೊರತೆಗೆಯಲಾಗಿದ್ದು, ಉಳಿದ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ’ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮ್ ತಿಳಿಸಿದ್ದಾರೆ.
‘ಮೃತರನ್ನು ಶಿವರಾಮ್ ಅವರ ಪತ್ನಿ ಬ್ರಸಿತಿ ದೇವಿ ಎಂದು ಗುರುತಿಸಲಾಗಿದೆ. ಉಳಿದಂತೆ, ಚುನ್ನಿ ಲಾಲ್, ಅಂಜು, ಜಾಗೃತಿ, ಪುಪೇಶ್ ಅವರು ನಾಪತ್ತೆಯಾಗಿದ್ದಾರೆ. ಕಲಾದೇವಿ, ಶಿವರಾಮ್ ಹಾಗೂ ಧರಮ್ ದಾಸ್ ಅವರು ಗಾಯಗೊಂಡಿದ್ದು, ನಿರ್ಮಾಂದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಜುಲೈ 30ರಿಂದ ಸೆ.8ರವರೆಗೆ ರಾಜ್ಯದ ವಿವಿಧೆಡೆ ಸಂಭವಿಸಿದ ಮಳೆ ಅನಾಹುತದಿಂದ 370 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 43 ಮಂದಿ ಭೂಕುಸಿತದಿಂದಲೇ ಕೊನೆಯುಸಿರೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.