ADVERTISEMENT

ಭಾರಿ ಮಳೆ: ಹಿಮಾಚಲ ಪ್ರದೇಶದ 496 ರಸ್ತೆಗಳು ಬಂದ್

ಪಿಟಿಐ
Published 7 ಆಗಸ್ಟ್ 2025, 16:20 IST
Last Updated 7 ಆಗಸ್ಟ್ 2025, 16:20 IST
ಹಿಮಾಚಲ ಪ್ರದೇಶದ ಮಂಡಿ ನಗರವನ್ನು ಮೋಡ ಸುತ್ತುವರೆದಿರುವುದು ಗುರುವಾರ ಕಂಡು ಬಂತು (ಪಿಟಿಐ ಚಿತ್ರ)
ಹಿಮಾಚಲ ಪ್ರದೇಶದ ಮಂಡಿ ನಗರವನ್ನು ಮೋಡ ಸುತ್ತುವರೆದಿರುವುದು ಗುರುವಾರ ಕಂಡು ಬಂತು (ಪಿಟಿಐ ಚಿತ್ರ)   

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುರುವಾರ ಮಳೆಯಾಗಿದ್ದು, ಶಿಮ್ಲಾದ ರಾಂಪುರದಲ್ಲಿ ಸಂಭವಿಸಿದ ಮೇಘ ಸ್ಪೋಟದಿಂದಾಗಿ ಆ ಪ್ರದೇಶದಲ್ಲಿ ಹಠಾತ್ ಪ್ರವಾಹ ಸಂಭವಿಸಿದೆ. ಭೂಕುಸಿತದಿಂದಾಗಿ ಮೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದ ಹಲವಾರು ಪ್ರದೇಶಗಳ 496 ರಸ್ತೆಗಳನ್ನು ಮುಚ್ಚಲಾಗಿದೆ.

ಬುಧವಾರ ರಾತ್ರಿ ಶಿಮ್ಲಾ ಜಿಲ್ಲೆಯ ರಾಂಪುರದ ದರ್ಶಲ್‌ನಲ್ಲಿ ಸಂಭವಿಸಿದ ಮೇಘ ಸ್ಪೋಟದಿಂದಾಗಿ ಟೆಕ್ಲೆಚ್ ಮಾರುಕಟ್ಟೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಆದರೆ, ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆವಹಿಸಿ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೂನ್‌ 20ರ ನಂತರ ಈವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 108 ಜನರು ಮೃತಪಟ್ಟಿದ್ದು, 26 ಜನರು ನಾಪತ್ತೆಯಾಗಿದ್ದಾರೆ. ಈವರೆಗೆ 58 ಹಠಾತ್ ಪ್ರವಾಹ, 28 ಮೇಘಸ್ಟೋಟ ಮತ್ತು 51 ಭಾರಿ ಭೂಕುಸಿತ ಘಟನೆಗಳು ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದಲ್ಲಿ ₹1,905 ಕೋಟಿ ಆಸ್ತಿ–ಪಾಸ್ತಿ ನಷ್ಟವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.