ADVERTISEMENT

ಹಿಮಾಚಲ: ಪ್ರವಾಹ ಪೀಡಿತ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2ಕೋಟಿ ಪರಿಹಾರ

ಪಿಟಿಐ
Published 13 ಜುಲೈ 2025, 7:08 IST
Last Updated 13 ಜುಲೈ 2025, 7:08 IST
<div class="paragraphs"><p>ಹಿಮಾಚಲ ಪ್ರದೇಶದಲ್ಲಿ ಉಂಟಾದ ಹಾನಿ</p></div>

ಹಿಮಾಚಲ ಪ್ರದೇಶದಲ್ಲಿ ಉಂಟಾದ ಹಾನಿ

   

ಚಿತ್ರ ಕೃಪೆ : ಎಕ್ಸ್‌

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ತೀವ್ರವಾಗಿ ಹಾನಿಗೊಳಗಾದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2 ಕೋಟಿ ಮತ್ತು ರಸ್ತೆ, ಇತರ ಮೂಲಸೌಕರ್ಯಗಳ ಪುನಃಸ್ಥಾಪನೆಗಾಗಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ADVERTISEMENT

ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿರುವ 68 ವಿಧಾನಸಭಾ ಕ್ಷೇತ್ರಗಳಲ್ಲಿ, ಮಂಡಿ ಅತಿಹೆಚ್ಚು ಬಾಧಿತವಾಗಿದೆ. ಮಂಡಿಯಲ್ಲಿ ಮಳೆಯಿಂದ ಹೆಚ್ಚು ವಿಪತ್ತುಗಳು ಸಂಭವಿಸಿವೆ.

ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ ಜುಲೈ 11 ರವರೆಗೆ ಹಿಮಾಚಲ ಪ್ರದೇಶವು ಒಟ್ಟು ₹751 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ.

31 ದಿಢೀರ್ ಪ್ರವಾಹಗಳು, 22 ಮೇಘಸ್ಫೋಟಗಳು ಮತ್ತು 17 ಭೂಕುಸಿತಗಳನ್ನು ರಾಜ್ಯ ಈ ಬಾರಿ ಕಂಡಿದೆ. ರಾಜ್ಯದಲ್ಲಿ 90 ಕ್ಕೂ ಹೆಚ್ಚು ಜನರು ಮೃತಪಟ್ಟರೆ, ಅದರಲ್ಲಿ 56 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ  ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.