ADVERTISEMENT

ಹಿಮಾಚಲದಲ್ಲಿ ಭೂಕುಸಿತ: ಕಿನ್ನೌರ್ ಜಿಲ್ಲೆಗೆ ಸಂಪರ್ಕ ಕಡಿತ

ಪಿಟಿಐ
Published 8 ಸೆಪ್ಟೆಂಬರ್ 2023, 13:51 IST
Last Updated 8 ಸೆಪ್ಟೆಂಬರ್ 2023, 13:51 IST
<div class="paragraphs"><p>ಭೂಕುಸಿತದ ಪರಿಣಾಮ ಹಿಮಾಚಲ ಪ್ರದೇಶದ ನಿಗುಲ್ಸಾರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ –ಪಿಟಿಐ ಚಿತ್ರ</p></div>

ಭೂಕುಸಿತದ ಪರಿಣಾಮ ಹಿಮಾಚಲ ಪ್ರದೇಶದ ನಿಗುಲ್ಸಾರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ –ಪಿಟಿಐ ಚಿತ್ರ

   

ರಾಮಪುರ/ಶಿಮ್ಲಾ: ಹಿಮಾಚಲ ಪ್ರದೇಶದ ನಿಗುಲ್ಸಾರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಭೂಕುಸಿತ ಸಂಭವಿಸಿ ಕಿನ್ನೌರ್ ಜಿಲ್ಲೆ ಮತ್ತು ಶಿಮ್ಲಾ ನಡುವೆ ಸಂಪರ್ಕ ಕಡಿತಗೊಂಡಿದೆ.

ಭೂಕುಸಿತದ ಪರಿಣಾಮ ಸೇಬು ತುಂಬಿರುವ ಟ್ರಕ್‌ಗಳು ಸೇರಿದಂತೆ ಕಿನ್ನೌರ್‌ನಿಂದ ಬರುವ ವಾಹನಗಳು ಹೆದ್ದಾರಿಯಲ್ಲಿಯೇ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಗೆ ಮಣ್ಣು ಹಾಗೂ ಬಂಡೆಗಳು ಜರಿದು ಬಿದ್ದಿರುವುದರಿಂದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಲ್‌. ಸುಮನ್‌ ಹೇಳಿದ್ದಾರೆ.

ಹೆದ್ದಾರಿಗೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ದೊಡ್ಡ ಗಾತ್ರದ ಬಂಡೆಗಳು ಕೂಡ ಉರುಳಿ ಬಿದ್ದಿರುವುದರಿಂದ ಅವುಗಳನ್ನು ತೆರವುಗೊಳಿಸುವ ಕಾರ್ಯ ವಿಳಂಬವಾಗಿದೆ ಎಂದಿದ್ದಾರೆ.

ಕಿನ್ನೌರ್‌ ಶಾಸಕ ಹಾಗೂ ಕಂದಾಯ ಸಚಿವ ಜಗತ್‌ ಸಿಂಗ್‌ ನೇಗಿ ಅವರು ಭೂಕುಸಿತ ಸಂಭವಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.