ADVERTISEMENT

ಹಿಂದಿ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆಯಷ್ಟೆ: ಅಶ್ವಿನ್

ಪಿಟಿಐ
Published 10 ಜನವರಿ 2025, 11:44 IST
Last Updated 10 ಜನವರಿ 2025, 11:44 IST
ಆರ್‌. ಅಶ್ವಿನ್‌
ಆರ್‌. ಅಶ್ವಿನ್‌   

ಚೆನ್ನೈ :  ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಅಧಿಕೃತ ಭಾಷೆಯಷ್ಟೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆರ್‌. ಅಶ್ವಿನ್ ಹೇಳಿದ್ದಾರೆ. 

ಖಾಸಗಿ ಕಾಲೇಜೊಂದರ ಘಟಿಕೋತ್ಸವದಲ್ಲಿ ಗುರುವಾರ ಮಾತನಾಡಿದ ಅವರು, ‘ನೀವು ಯಾವ ಭಾಷೆಯಲ್ಲಿ ಸಂವಾದ ನಡೆಸಲು ಬಯಸುತ್ತೀರಿ’ ಎಂದು ಪ್ರಶ್ನಿಸಿದರು.

ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಹಲವರು ಹೇಳಿದರು. ತಮಿಳು ಭಾಷೆಯ ಆಯ್ಕೆ ನೀಡಿದಾಗಲೂ ಬಹುತೇಕ ವಿದ್ಯಾರ್ಥಿಗಳು ಬೆಂಬಲಿಸಿದರು. ಹಿಂದಿ ಆಯ್ಕೆ ನೀಡಿದಾಗ ಯಾರೂ ಪ್ರತಿಕ್ರಿಯಿಸಲಿಲ್ಲ. ಈ ವೇಳೆ ಅಶ್ವಿನ್‌ ‘ಹಿಂದಿ ರಾಷ್ಟ್ರ ಭಾಷೆಯಲ್ಲ, ಅದು ಕೇವಲ ಅಧಿಕೃತ ಭಾಷೆಯಷ್ಟೆ ಎಂದು ನಾನು ಭಾವಿಸುತ್ತೇನೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.