ADVERTISEMENT

ನೋಟುಗಳಲ್ಲಿ ಗಾಂಧಿ ಬದಲಿಗೆ ಸಾವರ್ಕರ್‌ ಚಿತ್ರ ಮುದ್ರಿಸಿ: ಹಿಂದೂ ಮಹಾಸಭಾ

ಪಿಟಿಐ
Published 26 ಫೆಬ್ರುವರಿ 2023, 14:04 IST
Last Updated 26 ಫೆಬ್ರುವರಿ 2023, 14:04 IST
.
.   

ಮೀರಠ್‌(ಉತ್ತರ ಪ್ರದೇಶ): ನೋಟುಗಳಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರದ ಬದಲಿಗೆ ವಿ.ಡಿ. ಸಾವರ್ಕರ್‌ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಮುದ್ರಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಭಾನುವಾರ ಆಗ್ರಹಿಸಿದೆ.

ಪಾರ್ಲಿಮೆಂಟ್‌ ಹೌಸ್‌ಗೆ ತೆರಳುವ ರಸ್ತೆಗೆ ಸಾವರ್ಕರ್‌ ಹೆಸರಿಡಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಮಹಾಸಭಾದ ಮುಖಂಡರು ಒತ್ತಾಯಿಸಿದ್ದಾರೆ.

ತಮ್ಮ ಈ ಬೇಡಿಕೆಗಳನ್ನು ಈಡೇರಿಸಿದರೆ ಅದು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷ ಸಾವರ್ಕರ್‌ ಅವರಿಗೆ ಮೋದಿ ಸರ್ಕಾರ ಸಲ್ಲಿಸುವ ನಿಜವಾದ ಗೌರವ ಎಂದೂ ಮುಖಂಡರು ಹೇಳಿದ್ದಾರೆ.

ADVERTISEMENT

ಸಾವರ್ಕರ್ ಅವರ 58ನೇ ಪುಣ್ಯತಿಥಿ ಅಂಗವಾಗಿ ಮೀರಠ್‌ನ ಶಾರದಾ ರಸ್ತೆಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾದ ಕಚೇರಿಯಲ್ಲಿ ಭಾನುವಾರ ಪೂಜೆ ನಡೆಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್‌ ಅಶೋಕ್‌ ಶರ್ಮಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.