ನಿತೇಶ್ ರಾಣೆ
ಪುಣೆ: ಮೊಹಲ್ಲಾಗಳಲ್ಲಿ (ಮುಸ್ಲಿಮರು ವಾಸಿಸುವ ಪ್ರದೇಶ) ಭಗವದ್ಗೀತೆ ಬೋಧನೆಯನ್ನು ಪ್ರಚಾರ ಮಾಡಿದರೆ ‘ಹಿಂದೂ ರಾಷ್ಟ್ರ’ ಕಲ್ಪನೆಯು ಬಲಗೊಳ್ಳಲಿದೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಭಗವದ್ಗೀತೆಯು ಎಂದಿಗೂ ಧಾರ್ಮಿಕ ದ್ವೇಷವನ್ನು ಹರಡುವುದಿಲ್ಲ. ಮತಾಂತರವನ್ನೂ ಬೆಂಬಲಿಸುವುದಿಲ್ಲ. ಹೀಗಾಗಿ ಮೊಹಲ್ಲಾಗಳಲ್ಲಿ ಭಗವದ್ಗೀತೆಯ ಬೋಧನೆಯನ್ನು ಪ್ರಚಾರ ಮಾಡಿದರೆ ಅವರ ಚಿಂತನೆಯೂ ಬದಲಾಗುತ್ತದೆ. ಇದು ನಮ್ಮ ಹಿಂದೂ ರಾಷ್ಟ್ರದ ಕಲ್ಪನೆಗೆ ಪುಷ್ಠಿ ನೀಡುತ್ತದೆ’ ಎಂದಿದ್ದಾರೆ.
‘ಭಗವದ್ಗೀತೆಯ ಬೋಧನೆಯು ಸಾಮರಸ್ಯ ಮೂಡಿಸುತ್ತದೆ ಹಾಗೂ ಚಿಂತನೆಯನ್ನು ಬದಲಾಯಿಸುತ್ತದೆ. ಅದರ ಸಂದೇಶವು ಎಲ್ಲಾ ಮೂಲೆಗಳನ್ನು ತಲುಪಬೇಕು’ ಎಂದರು.
ಒಂದನೇ ತರಗತಿಯಿಂದ ಶಾಲಾ ಪಠ್ಯಕ್ರಮದಲ್ಲಿ ಹಿಂದಿ ಭಾಷೆ ಬೋಧಿಸುವುದರ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಉತ್ತರಿಸಿದ ಅವರು ‘ಯಾವುದೇ ಭಾಷೆಯ ಬೋಧನೆಯನ್ನು ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಬಯಸಿದಲ್ಲಿ ಸಂಸ್ಕೃತವನ್ನೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.