
ಹಿಪ್ಪಲಿ
ನವದೆಹಲಿ: ರೂರ್ಕೆಲಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿ) ಸಂಶೋಧಕರು, ಹಿಪ್ಪಲಿಯಲ್ಲಿ ನೈಸರ್ಗಿಕ ಸಂಯುಕ್ತವೊಂದನ್ನು(ಕಾಂಪೌಂಡ್) ಗುರುತಿಸಿದ್ದು, ಇದು ಕರುಳಿನ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರುಳಿನ ಕ್ಯಾನ್ಸರ್ ಎಂಬುದು ದೇಹದ ದೊಡ್ಡ ಕರುಳಿನಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ಗಡ್ಡೆಗಳನ್ನು ರೂಪಿಸುವ ರೋಗವಾಗಿದೆ.
‘ಹಿಪ್ಪಲಿಯಲ್ಲಿನ ಸಂಯುಕ್ತವು ಕಡಿಮೆ ಅಡ್ಡ ಪರಿಣಾಮಗಳೊಂದಿಗೆ ಕರುಳಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಿದೆ’ ಎಂದು ಸಹ ಪ್ರಾಧ್ಯಾಪಕ ಬಿಜೇಶ್ ಕುಮಾರ್ ಬಿಸ್ವಾಲ್ ತಿಳಿಸಿದರು.
ಅಮೆರಿಕದ ಉತ್ತರ ಕರೊಲಿನಾ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಲಾಗಿದೆ. ಸಂಶೋಧನೆಯ ವರದಿಯನ್ನು ಪ್ರತಿಷ್ಠಿತ ‘ಬಯೊಫ್ಯಾಕ್ಟರ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ 2022ರ ವರದಿ ಪ್ರಕಾರ, ಜಗತ್ತಿನಾದ್ಯಂತ ಸುಮಾರು 19 ಲಕ್ಷ ಜನರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಈ ಕ್ಯಾನ್ಸರ್‌ನಿಂದ ಈವರೆಗೆ ಸುಮಾರು 9 ಲಕ್ಷ ಸಾವುಗಳು ಸಂಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.