ADVERTISEMENT

ನೂತನ ಸಂಸತ್ ಭವನದಲ್ಲಿ ಬ್ರಿಟೀಷರಿಂದ ನೆಹರು ಪಡೆದ ರಾಜದಂಡ ‘ಸೆಂಗೋಲ್’ ಸ್ಥಾಪನೆ: ಶಾ

ಪಿಟಿಐ
Published 24 ಮೇ 2023, 7:49 IST
Last Updated 24 ಮೇ 2023, 7:49 IST
   

ನವದೆಹಲಿ: ಬ್ರಿಟೀಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ 'ಸೆಂಗೊಲ್' ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಆಗ ಏಕೆ ನೀಡಲಾಯಿತು ಮತ್ತು ಈಗ ಏಕೆ ಸ್ಥಾಪಿಸಲಾಗುತ್ತಿದೆ ಎಂಬುದರ ಉದ್ದೇಶ ಸ್ಪಷ್ಟವಾಗಿದೆ ಎಂದು ಶಾ ಮಾರ್ಮಿಕವಾಗಿ ನುಡಿದಿದ್ದಾರೆ..

ಅಧಿಕಾರ ಹಸ್ತಾಂತರವು ಕೇವಲ ಕೈಕುಲುಕುವುದು ಅಥವಾ ದಾಖಲೆಗಳಿಗೆ ಸಹಿ ಮಾಡುವುದು ಮಾತ್ರವಲ್ಲ. ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಪ್ರದಾಯಗಳೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಅವರು ಹೇಳಿದರು.

ADVERTISEMENT

‘ಜವಾಹರಲಾಲ್ ನೆಹರು ಅವರು ಆಗಸ್ಟ್ 14, 1947ರಂದು ಅನುಭವಿಸಿದ ಅದೇ ಭಾವನೆಯನ್ನು ಸೆಂಗೋಲ್ ಪ್ರತಿನಿಧಿಸುತ್ತದೆ’ಎಂದು ಅವರು ಹೇಳಿದರು.

ನೂತನ ಸಂಸತ್ ಕಟ್ಟಡವು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಉದಾಹರಣೆಯಾಗಿದೆ ಎಂದು ಗೃಹ ಸಚಿವರು ಹೇಳಿದರು.

ಉದ್ಘಾಟನೆಯ ದಿನದಂದು 7,000 ಕಾರ್ಮಿಕರನ್ನು (ಶ್ರಮ ಯೋಗಿಗಳು) ಪ್ರಧಾನ ಮಂತ್ರಿ ಗೌರವಿಸಲಿದ್ದಾರೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.