ADVERTISEMENT

ಮಹಿಳಾ ನ್ಯಾಯಮೂರ್ತಿಗಳ ಪೀಠದಿಂದ ಸೆಪ್ಟೆಂಬರ್ 5ರಂದು ಕಲಾಪ!

ಪಿಟಿಐ
Published 1 ಸೆಪ್ಟೆಂಬರ್ 2018, 16:04 IST
Last Updated 1 ಸೆಪ್ಟೆಂಬರ್ 2018, 16:04 IST
ಇಂದಿರಾ ಬ್ಯಾನರ್ಜಿ ಮತ್ತು ಆರ್.ಬಾನುಮತಿ
ಇಂದಿರಾ ಬ್ಯಾನರ್ಜಿ ಮತ್ತು ಆರ್.ಬಾನುಮತಿ   

ನವದೆಹಲಿ: ನ್ಯಾಯಮೂರ್ತಿಗಳಾದ ಆರ್.ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಮಹಿಳಾ ನ್ಯಾಯಮೂರ್ತಿಗಳ ಪೀಠ ಸೆಪ್ಟೆಂಬರ್ 5ರಂದು ಕಲಾಪ ನಡೆಸಲಿದ್ದು, ಇತಿಹಾಸ ಮರುಕಳಿಸಲಿದೆ.

2013ರಲ್ಲಿ ನ್ಯಾಯಮೂರ್ತಿಗಳಾದ ಜ್ಞಾನಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಮಹಿಳಾ ನ್ಯಾಯಮೂರ್ತಿಗಳ ಪೀಠ ರಚನೆಯಾಗಿತ್ತು.

ಎಂಟನೇ ಮಹಿಳಾ ನ್ಯಾಯಮೂರ್ತಿಯಾಗಿ ಬ್ಯಾನರ್ಜಿ ಅವರು ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಸುಪ್ರೀಂಕೋರ್ಟ್‌ನಲ್ಲಿ ಮೂವರು ಹಾಲಿ ಮಹಿಳಾ ನ್ಯಾಯಮೂರ್ತಿಗಳು ಕೆಲಸ ನಿರ್ವಹಿಸುವಂತಾಯಿತು. ಇದು ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲು.ಈ ಪೈಕಿ ನ್ಯಾಯಮೂರ್ತಿ ಭಾನುಮತಿ ಅವರು ವೃತ್ತಿಯಲ್ಲಿ ಹಿರಿಯರಾಗಿದ್ದು, 2014ರ ಆಗಸ್ಟ್ 13ರಂದು ‘ಸುಪ್ರೀಂ’ ನ್ಯಾಯಮೂರ್ತಿಯಾಗಿದ್ದರು.

ADVERTISEMENT

ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ, ನ್ಯಾಯಮೂರ್ತಿಗಳಾದ ಸುಜಾತಾ ಮತ್ತು ರುಮಾ ಪಾಲ್ ಅವರು ಸಂಪೂರ್ಣ ಅವಧಿ ಪೂರೈಸಿದ್ದರು.

ಈವರೆಗಿನ ಮಹಿಳಾ ನ್ಯಾಯಮೂರ್ತಿಗಳು:

ಫಾತಿಮಾ ಬೀವಿ

ಸುಜಾತಾ ಮನೋಹರ್

ರುಮಾ ಪಾಲ್

ಜ್ಞಾನಸುಧಾ ಮಿಶ್ರಾ

ರಂಜನಾ ಪ್ರಕಾಶ್ ದೇಸಾಯಿ

ಆರ್. ಬಾನುಮತಿ

ಇಂದೂ ಮಲ್ಹೋತ್ರಾ

ಇಂದಿರಾ ಬ್ಯಾನರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.