ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಗೂಢಚಾರ (ಸ್ಲೀಪರ್ ಸೆಲ್) ಎಂಬ ಆರೋಪದ ಮೇಲೆ ಕ್ಷೇತ್ರೀಯ ಬೆಂಬಲಿಗನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಶನಿವಾರ ಬಂಧಿಸಿದೆ.
ಅಲ್ತಾಫ್ ಹುಸೇನ್ ವಾಗೆ ಬಂಧಿತ ವ್ಯಕ್ತಿ. ಈತ ಉಗ್ರ ಸಂಘಟನೆಗೆ ರಹಸ್ಯವಾಗಿ ಸಹಕರಿಸುತ್ತಿದ್ದ ಎಂದು ಎಸ್‌ಐಎ ವಕ್ತಾರರು ತಿಳಿಸಿದ್ದಾರೆ.
‘ಪ್ರಕರಣವೊಂದರ ತನಿಖೆ ವೇಳೆ ಉಗ್ರ ಸಂಘಟನೆಯ ಮುಖಂಡನ ಜೊತೆ ಅಲ್ತಾಫ್ ಸಂಪರ್ಕದ ಮಾಹಿತಿ ಸಿಕ್ಕಿತ್ತು. ಈತ ಕಾನೂನುಬಾಹಿರ ಮತ್ತು ಭಾರತ ವಿರೋಧಿ ಚಟುವಟಿಕೆ ನಡೆಸಲು ಉಗ್ರರಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದ’ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.