ADVERTISEMENT

ಮಧ್ಯಪ್ರದೇಶ | ವ್ಯಕ್ತಿಯ ತಲೆ ಮೇಲೆ ಬೆಳೆದ ನಾಲ್ಕು ಇಂಚು ಉದ್ದದ ಕೋಡು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 14:43 IST
Last Updated 19 ಸೆಪ್ಟೆಂಬರ್ 2019, 14:43 IST
ತಲೆ ಮೇಲೆ ಮೂಡಿದ್ದ ಕೋಡು
ತಲೆ ಮೇಲೆ ಮೂಡಿದ್ದ ಕೋಡು   

ಮಧ್ಯಪ್ರದೇಶ: ರಾಜ್ಯದ ಸಾಗರ್ ಜಿಲ್ಲೆಯ ರಾಹ್ಲಿ ಗ್ರಾಮದ ಶ್ಯಾಮ್‌ ಲಾಲ್‌ ಯಾದವ್‌ (74) ಅವರ ತಲೆ ಮೇಲೆ ಬೆಳೆದಿದ್ದ ನಾಲ್ಕು ಇಂಚು ಉದ್ದದ ಕೋಡನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತೆಗೆದಿದ್ದಾರೆ.

ಹಲವು ವರ್ಷದಿಂದ ತಲೆಯಲ್ಲಿ ಬೆಳೆಯುತ್ತಿದ್ದ ಕೋಡಿನ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಆರಂಭದಲ್ಲಿ ಅದನ್ನು ಕತ್ತರಿಸಿದ್ದರು. ಆದರೆ ಅದರಬೆಳವಣಿಗೆ ಹೆಚ್ಚಿದಾಗ ವೈದ್ಯರನ್ನು ಸಂಪರ್ಕಿಸದೇ ಬೇರೆ ದಾರಿ ಇರಲಿಲ್ಲ. ಆರಂಭದಲ್ಲಿ ವೈದ್ಯರಿಗೂ ಅಚ್ಚರಿಯಾಗಿತ್ತು. ಆದರೆ ಭಾಗ್ಯೋದಯತೀರ್ಥ್‌ ಆಸ್ಪತ್ರೆಯ ವೈದ್ಯರು ಕೋಡನ್ನು ಕತ್ತರಿಸಿ ಯಾದವ್‌ ಅವರನ್ನು ನಿರಾಳರನ್ನಾಗಿಸಿದ್ದಾರೆ.

‌ಈ ರೀತಿಯ ಕೋಡು ಸಾಮಾನ್ಯವಾಗಿ ಸೂರ್ಯನ ಬೆಳಕು ಹೆಚ್ಚು ಬೀಳುವ ದೇಹದ ಅಂಗಾಂಗಗಳ ಮೇಲೆ ಮೂಡುತ್ತದೆ. ಇದನ್ನು ‘ದೆವ್ವದ ಕೋಡು’ ಎಂದೂ ಕರೆಯುತ್ತಾರೆ.

ADVERTISEMENT

ಸದ್ಯ ಶ್ಯಾಮ್‌ ಅವರ ತಲೆಯ ಎಕ್ಸರೆ ಮಾಡಲಾಗಿದ್ದು, ಕೋಡಿನ ಬೇರುಗಳು ಹೆಚ್ಚು ಆಳಕ್ಕೆ ಇಳಿದಿಲ್ಲ ಎಂಬುದು ಕಂಡುಬಂದಿದೆ. ಅಚ್ಚರಿ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯ ವಿವರಗಳನ್ನು ಅಂತರರಾಷ್ಟ್ರೀಯ ಸರ್ಜರಿ ನಿಯತಕಾಲಿಕದಲ್ಲಿ ಪ್ರಕಟವಾಗಲಿದೆ.

‘ನನ್ನ ತಲೆಮೇಲೆ ಹುಟ್ಟಿದ್ದ ಕೋಡಿನಿಂದ ಆರಂಭದಲ್ಲಿ ಏನೂ ತೊಂದರೆಯಾಗಿರಲಿಲ್ಲ. ಅದು ಇನ್ನೂ ಗಡಸಾಗಿ ಹೆಚ್ಚು ಬೆಳೆದಾಗ ವೈದ್ಯರನ್ನು ಸಂಪರ್ಕಿಸಿದೆ’ ಎಂದು ಯಾದವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.