ADVERTISEMENT

ಉ. ಪ್ರದೇಶ: ಚೀಲದಲ್ಲಿ ಭ್ರೂಣ ಕೊಂಡೊಯ್ದು ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ‌

ಪಿಟಿಐ
Published 23 ಆಗಸ್ಟ್ 2025, 14:36 IST
Last Updated 23 ಆಗಸ್ಟ್ 2025, 14:36 IST
_
_   

ಲಖೀಂಪುರ ಖೀರೀ (ಉತ್ತರ ಪ್ರದೇಶ): ಚೀಲದಲ್ಲಿ ಮೃತ ಭ್ರೂಣವನ್ನು ಜಿಲ್ಲಾಧಿಕಾರಿ ಕಚೇರಿಗೆ ಕೊಂಡೊಯ್ದ ವ್ಯಕ್ತಿಯೊಬ್ಬರು, ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಶುಕ್ರವಾರ ಆರೋಪಿಸಿದ್ದಾರೆ. ತನಿಖೆ ಆರಂಭಿಸಿದ ಜಿಲ್ಲಾಡಳಿತ ಆಸ್ಪತ್ರೆಗೆ ಬೀಗ ಹಾಕಿದೆ. 

ನೌಸರ್ ಜೋಗಿ ಗ್ರಾಮದ ನಿವಾಸಿ ವಿಪಿನ್ ಸಂತ್ರಸ್ತ ವ್ಯಕ್ತಿ. ಮಹೆವಾಗಂಜ್‌ನ ಗೋಲ್ಡರ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮ್ಮ ಮಗು ಮೃತಪಟ್ಟಿದ್ದು, ಪತ್ನಿ ರೂಬಿ ಅವರ ಸ್ಥಿತಿ ಗಂಭೀರವಾಗಿ ಎಂದು ಹೇಳಿದ್ದಾರೆ.

ಘಟನೆ ‌ಹಿನ್ನಲೆ, ಆಸ್ಪತ್ರೆಗೆ ಬೀಗ ಜಡಿಯಲು ಮತ್ತು ಅಲ್ಲಿ ದಾಖಲಾಗಿರುವ ರೋಗಿಗಳನ್ನು ಹತ್ತಿ‌ರದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ADVERTISEMENT

‘ವಿಪಿನ್ ಅವರ ಪತ್ನಿಯ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಖಚಿತಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಹೇಳಿದ್ದು, ಅವರ ವೈದ್ಯಕೀಯ ಖರ್ಚನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.

ರೂಬಿ ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.