ADVERTISEMENT

ಪ್ರತಿದಿನ ನಿಗದಿತ ಅವಧಿಯಷ್ಟೇ ಆನ್‌ಲೈನ್‌ ತರಗತಿ?

ಎಚ್‌ಆರ್‌ಡಿಯಿಂದ ಶೀಘ್ರ ಮಾರ್ಗಸೂಚಿ ಬಿಡುಗಡೆ

ಪಿಟಿಐ
Published 16 ಜೂನ್ 2020, 13:37 IST
Last Updated 16 ಜೂನ್ 2020, 13:37 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಆನ್‌ಲೈನ್‌ ತರಗತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ‘ಆನ್‌ಲೈನ್‌ ತರಗತಿ ಮಾರ್ಗಸೂಚಿ’ ರಚನೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಸಿದ್ಧತೆ ಆರಂಭಿಸಿದೆ.

ಕಳೆದ ಮೂರು ತಿಂಗಳಿಂದ ಶಾಲೆಗಳು ಮುಚ್ಚಿದ್ದು, ಹಲವು ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಕೆಲ ಶಾಲೆಗಳು ವಾಡಿಕೆಯಂತೆ ಬೆಳಗ್ಗಿನಿಂದ ಸಂಜೆಯವರೆಗೂ ತರಗತಿಗಳನ್ನು ನಡೆಸುತ್ತಿದ್ದು, ಇದರಿಂದ ದಿನದಲ್ಲಿ ಹಲವು ಗಂಟೆಗಳ ಕಾಲ ವಿದ್ಯಾರ್ಥಿಗಳು ಕಂಪ್ಯೂಟರ್‌ ಪರದೆಯ‌ ಮುಂದೆಯೇ ಕಡ್ಡಾಯವಾಗಿ ಕುಳಿತುಕೊಳ್ಳುವಂತಾಗಿದೆ. ಜೊತೆಗೆ ಕೆಲ ಮನೆಗಳಲ್ಲಿ ಇಬ್ಬರು ಮಕ್ಕಳಿದ್ದು, ಕೇವಲ ಒಂದು ಕಂಪ್ಯೂಟರ್‌ ವ್ಯವಸ್ಥೆ ಇರುತ್ತದೆ. ಹೀಗಾಗಿ ಮತ್ತೊಂದು ಮಗು ಆನ್‌ಲೈನ್‌ ತರಗತಿಗಳಿಂದ ವಂಚಿತವಾಗುತ್ತಿದೆ ಎಂದು ಪೋಷಕರಿಂದ ದೂರುಗಳು ಕೇಳಿ ಬಂದ ಕಾರಣದಿಂದ ಮಾರ್ಗಸೂಚಿಗಳ ರಚನೆಗೆ ಸಚಿವಾಲಯ ಮುಂದಾಗಿದೆ.

ನಿಗದಿತ ಅವಧಿ: ‘ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರೊಂದಿಗೆ ಚರ್ಚಿಸಿ ಮಾರ್ಗಸೂಚಿಗಳನ್ನು ರಚಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯ ಎಲೆಕ್ಟ್ರಾನಿಕ್‌ ಉಪಕರಣಗಳ ಮುಂದೆ ಕುಳಿತುಕೊಳ್ಳದಂತೆ ನಿಗದಿತ ಅವಧಿಯ ಆನ್‌ಲೈನ್‌ ತರಗತಿಗೆ ಶಿಫಾರಸು ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸೈಬರ್‌ ಸುರಕ್ಷತಾ ಕ್ರಮಗಳು, ಸುರಕ್ಷಿತ ಕಲಿಕಾ ವಾತಾವರಣ ಸೃಷ್ಟಿ ಮುಂತಾದ ವಿಷಯಗಳೂ ಈ ಮಾರ್ಗಸೂಚಿಯಲ್ಲಿ ಇರಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.