ADVERTISEMENT

ಬಾರಾಮುಲ್ಲ: ಇಬ್ಬರು ಎಲ್‌ಇಟಿ ಉಗ್ರರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:47 IST
Last Updated 6 ಮೇ 2022, 15:47 IST

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯಲ್ಲಿ ಶುಕ್ರವಾರ ಲಷ್ಕರ್–ಎ–ತಯಬಾ (ಎಲ್‌ಇಟಿ) ಸಂಘಟನೆಯ ಹೈಬ್ರಿಡ್‌ ಉಗ್ರ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾರಾಮುಲ್ಲದ ಹೈಡರ್‌ ಮೊಹಲ್ಲಾದ ಆಶಿಕ್‌ ಹೊಸೈನ್‌ ಲೋನ್‌,ಬಾರಾಮುಲ್ಲ ಕಾಂತ್‌ಬಾಗ್‌ನ ನಿವಾಸಿ ಉಜೈರ್‌ ಅಮಿನ್‌ ಗನೈ ಬಂಧಿತರು.

'ಉಗ್ರರ ಚಲನವಲನದ ಖಚಿತ ಮಾಹಿತಿ ಮೇರೆಗೆ ಬಾರಾಮುಲ್ಲದ ಚೆರದಾರಿ ಎಂಬ ಚೆಕ್‌ಪೋಸ್ಟ್‌ ಬಳಿ ತಪಾಸಣೆ ನಡೆಸಿದಾಗ ಇಬ್ಬರು ಉಗ್ರರು ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದಿದ್ದು, ಪರಾರಿಯಾಗಲು ಯತ್ನಿಸಿದ ಅವರನ್ನು ಭದ್ರತಾಪಡೆಗಳು ಬಂಧಿಸಿವೆ. ಬಂಧಿತರಿಂದ ಒಂದು ಪಿಸ್ತೂಲ್‌, ಮ್ಯಾಗಜೀನ್‌, ಎಂಟು ಜೀವಂತ ಗುಂಡುಗಳು, ಎರಡು ಹ್ಯಾಂಡ್‌ ಗ್ರೆನೆಡ್‌, ಎರಡು ಯುಬಿಜಿಎಲ್‌ ಗ್ರೆನೆಡ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

ADVERTISEMENT

‘ಬಂಧಿತರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ನಂಟು ಹೊಂದಿದ್ದು,ಬಾರಾಮುಲ್ಲಾ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಉದ್ದೇಶದಿಂದ ವಿದೇಶಿ ಭಯೋತ್ಪಾದಕರ ಮೂಲಕ ಈ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.