ಹೈದರಾಬಾದ್: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಡಿ ಸಹಾಯಕ ವಿಭಾಗೀಯ ಎಂಜಿನಿಯರ್ (ಎಡಿಇ) ಒಬ್ಬರನ್ನು ಮಂಗಳವಾರ ಬಂಧಿಸಿರುವ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶೋಧದ ವೇಳೆ ₹ 2.18 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯು ತೆಲಂಗಾಣದ ದಕ್ಷಿಣ ವಿದ್ಯುತ್ ಸರಬರಾಜು ಕಂಪನಿಯ (ಟಿಜಿಎಸ್‌ಪಿಡಿಸಿಎಲ್) ಸಹಾಯಕ ವಿಭಾಗೀಯ ಎಂಜಿನಿಯರ್ ಆಗಿದ್ದಾರೆ. ಅವರ ಮನೆ ಮತ್ತು ಸಂಬಂಧಿಕರಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಶೋಧದ ವೇಳೆ ಹಲವು ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಒಂದು ಫ್ಲ್ಯಾಟ್, ಜಿ+5 ಮಹಡಿಯ ಕಟ್ಟಡ, ಒಂದು ಕಂಪನಿ ಹೆಸರಿನಲ್ಲಿ 10 ಎಕರೆ ಜಮೀನು, ಆರು ಪ್ರಮುಖ ಪ್ರದೇಶಗಳಲ್ಲಿ ನಿವೇಶಗಳನು, ಒಂದು ಕೃಷಿ ಭೂಮಿ, ನಾಲ್ಕು ಚಕ್ರದ ಎರಡು ವಾಹನ, ಚಿನ್ನದ ಆಭರಣ ಮತ್ತು ಬ್ಯಾಂಕಿನ ಠೇವಣಿಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.
ಅಧಿಕಾರಿಯ ತನ್ನ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಇಷ್ಟೆಲ್ಲ ಸ್ಥಿರ ಮತ್ತು ಚರ ಆಸ್ತಿಗಳನ್ನು ಗಳಿಸಿದ್ದಾರೆ ಎಂಬುದು ಗೊತ್ತಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.